ತೂರಿ ಜಿಗಿವ
ಹಾಲ ನೊರೆಯ ಜೋಗದಂತೆ
ಕನ್ನಡಿಗರೆ ಬನ್ನಿರಿ,
ಮೈಗೊಡವಿಕೊಂಡು ನುಗ್ಗಿರಿ.
ಜಾತಿ ಭೇದ ತುಳಿಯುತಾ,
ಮನದ ಮಲಿನ ತೊಳೆಯುತಾ,
ಮನುಜ ಮತವೆ ಹಿತವೆನ್ನುತಾ
ಹಾಡಿರಿ, ಕುಣಿಯಿರಿ, ನಾಡಹಬ್ಬ
ನಡೆಸಿರಿ.
ಬುದ್ಧ, ಬಸವ, ಮಹಾವೀರ, ಕಬೀರರಂತೆ
ಕ್ರಾಂತಿ, ಶಾಂತಿ, ಕಾಂತಿಧೂತರಾಗಿ,
ನೆಲೆಯ, ನುಡಿಯ ನಲಿವಿಗಾಗಿ,
ನಾಡ, ನದಿಯ ಹೃದಯವಾಗಿ,
ದಸರಾ, ದಸರಾ, ದಸರಾ ಎಂದು
ಹಾಡಿರಿ, ಕುಣಿಯಿರಿ, ನಾಡಹಬ್ಬ ನಡೆಸಿರಿ.