Dec 20, 2012

ಬಿಂಬ – 87ನನ್ನ ಗೆಳತಿ
ಅವಳ ಸವತಿ –
ಸಾಹಿತ್ಯ

ಬಿಂಬ – 86ಬಾಳಿಗುಂಟ ಬೆಳಗು –
ಅವಳ ಕಿರುನಗು

ಬಿಂಬ – 85ಮೊಗೆದಷ್ಟೂ ಮುಗಿಯದ
ಸಂಪತ್ತು ಮತ್ತು ನನ್ನ ದುರಾಸೆ –
ಸಾಹಿತ್ಯ

ಬಿಂಬ – 84ನಿರಂತರ ನಶೆ –
ಕವಿತೆ

ಬಿಂಬ - 83ಬದುಕಿಗಿಷ್ಟು ಬಣ್ಣವಿಡಲು ಬಯಲ ದಾರಿಗುಂಟ 

Dec 16, 2012

ಬಿಂಬ – 82ಕಾವ್ಯದ ನಶೆ ನಿರಂತರ

Nov 13, 2012

ಬೆಳಕಿನ ಹಬ್ಬಮಾಸದ ಬೆಳಕಿಗೆ ವರುಷದ ಹಂಗೇಕೆ?
ಒಲುಮೆಯ ಹೊಳೆಯು ಕತ್ತಲಿಗೆ ಕಾಯಬೇಕೆ?
ಬಯಸಿದ ಹಾದಿಗೆ ಬೆಳಕಿನ ಬೆಂಬಲವಿರಲು,
ಜೊತೆಯಲಿ ಚಣಗಳ ಸವಿಯುತ ಸಾಗೋಣ. 

Sep 28, 2012

ಬಿಂಬ - 81ಸಾಹಿತ್ಯ ಸಾಧಕನ, ಸಾಮಾನ್ಯನ ಸಾಮರ್ಥ್ಯಕ್ಕೆ ಸಾಧನ ಮತ್ತು ಸವಾಲು

ಹೀಗೊಂದು ಪ್ರಶ್ನೆ?ನನ್ನ ಕಷ್ಟಗಳು ಕರಗಿಹೋಗಿದ್ದು
ಕ್ಲಿಷ್ಟ ಕಾಲದಲ್ಲಿ ನಗುವುದು
ಕಲಿಸಿದ ಅಮ್ಮನಿಂದಲೋ,
ಇಲ್ಲಾ ಅವಳ ಕಿರುನಗೆಯಿಂದಲೋ?

Sep 24, 2012

ಬಿಂಬ: 76 – 80ಬಿಂಬ - 76
ಹೊಂಗೆ ನೆರಳಲಿ ನಲಿವ ನಕ್ಷತ್ರ ನುಸುಳಿದ ಕಿರಣ
ಬಿಂಬ - 77
ಮೌನ ಮೀಟಿದಷ್ಟು ಮಾತು ಮಥಿಸಲಾರದು
ಬಿಂಬ - 78
ಬೊಜ್ಜಿಗಿಂತ ಬೆಟ್ಟ ಕರಗಿಸುವುದೇ ಸಲೀಸು
ಬಿಂಬ - 79
ಅವಳ ಮಾತು ಮುತ್ತು, ಮೌನ ಮತ್ತು
ಬಿಂಬ - 80
ಕವಿಗೆ ಕಲ್ಪವೃಕ್ಷ ಮದ್ಯ, ಇಲ್ಲವೇ ಪದ್ಯ

Jul 6, 2012

ಅಂತರಂಗದ ಅಡ್ಡಿನಾನೆಂಬುದು ನರಕ
ಹೆಸರಿಲ್ಲದ ಇರುವೆಗಿಲ್ಲವೆ?
ಸಖ, ಸುಖ
ನಮ್ಮದಾಗಿರುವಾಗ  ಜಗ
ಹೆಸರಿಗಿರಬೇಕೆಂಬ ಜಾಡ್ಯ
ಕೋಟಿ  ಕಸರತ್ತು ಕಣದಲಿ
ಬೇಕೆ ಸೋಲು, ಗೆಲುವುಗಳ ಆಟ,
ಭ್ರಾಂತಿ, ಭ್ರಮೆಗಳ ಕಾಟ?
ನಾನೆಂಬ ತೊಡಕಿಗೆ ಬೇಕೆ
ಕಪಟ, ಕಿರೀಟ?
ಕ್ಷುಲ್ಲಕ ನೆವಗಳಿಗೆ
ಬರಿದಾಗಬೇಕೆ ಯಾನ?
ಸಾಗರವ ಕಡೆಗಣಿಸಿ,
ಹನಿಗಳ ಅಟ್ಟಿಕೊಂಡು
ಸಾಧಿಸುವ ಧಾವಂತ
ಕಳೆದು ಹೋಗುವೆವು ಚಣದಿ
ಹೆಜ್ಜೆಗಳೂ ಹೇಸುವಂತೆ
ಹೆಸರಿಲ್ಲದೆಡೆಗೆ

Mar 6, 2012

ನಿನ್ನ ನಗುಊಟ ತೆಗೆದುಕೊ, ನಿನಗಿಷ್ಟವಾದರೆ,
ಗಾಳಿಯೂ ಸಹ, ಆದರೆ ನನ್ನಿಂದ
ನಿನ್ನ ನಗು ಕಸಿದುಕೊಳ್ಳಬೇಡ.

ಗುಲಾಬಿ ತೆಗೆದುಕೊಳ್ಳಬೇಡ
ನೀನು ಕಿತ್ತುಕೊಟ್ಟ ಶೂಲದ ಹೂ
ಥಟ್ಟನೆ ನೀರು ಖುಷಿಗೆ ಸ್ಪೋಟಿಸಿದಾಗ,
ಚಣದಿ ಬೆಳ್ಳಿಯ ಅಲೆ ನಿನ್ನಲ್ಲಿ ಹುಟ್ಟುತ್ತವೆ.

ನನ್ನ ಕಠಿಣ ಹೋರಾಟದಿಂದ ದಣಿದು
ಸೊರಗಿದ ಕಣ್ಣುಗಳೊಂದಿಗೆ ಮರಳಿದಾಗ,
ಒವೊಮ್ಮೆ ಬದಲಾಗದ ಜಗ ಕಂಡಿರುವೆ
ಆದರೆ ನಿನ್ನ ನಗುವಿನ ಆಗಮನವಾದಾಗ,
ಅದು ನನ್ನ ಹುಡುಕುತ್ತಾ ಆಗಸದೆತ್ತರಕ್ಕೆ ಹಾರಿ,
ನನ್ನ ಬದುಕಿಗೆ ಎಲ್ಲಾ ಬಾಗಿಲು ತೆರೆಯುತ್ತದೆ.

ನನ್ನ ಪ್ರಿಯೆ, ಕಠೋರಸ್ಥಿತಿಯಲ್ಲೂ ನಿನ್ನ
ನಗೆ ತೆರೆಯುತ್ತೆ, ಮತ್ತೆ ಕೂಡಲೇ ನೀ ಕಂಡರೆ
ನನ್ನ ರಕ್ತ ರಸ್ತೆ ಕಲ್ಲುಗಳಿಗೆ ರಾಚಿರುವುದನ್ನು,
ನಗು, ನಗುತ್ತಲೇ ಇರು, ಏಕೆಂದರೆ
ನಿನ್ನ ನಗುವೇ ನನ್ನ ಕೈಗಳಿಗೆ
ಆಗ ಸಿಗುವ ಹೊಸ ಖಡ್ಗ.

ಸಾಗರದಂಚಿಗೆ ಶರತ್ಕಾಲಕ್ಕೆ,
ನಿನ್ನ ನಗು ನೊರೆಯುಕ್ಕಿದ ಜಲಪಾತ ಸೃಷ್ಟಿಸಬೇಕು
ಮತ್ತೆ ವಸಂತದಲ್ಲಿ, ಪ್ರಿಯೆ,
ನಿನ್ನ ನಗು ನಾನು ಇಷ್ಟಪಟ್ಟು ಕಾಯುತ್ತಿದ್ದ
ಹೂವಿನ ಹಾಗೆ, ತಿಳಿನೀಲಿ ಹೂ, ನನ್ನ ಮಾರ್ದನಿಸುವ ದೇಶದ ಗುಲಾಬಿ.

ರಾತ್ರಿ ನಗು, ದಿನದಲ್ಲಿ ನಗು,
ಚಂದ್ರನ ನೋಡಿ ನಗು,
ಆ ದ್ವೀಪದ ತಿರುವು ರಸ್ತೆಗಳ ನೋಡಿ ನಗು,
ನಿನ್ನ ಬಹುವಾಗಿ ಪ್ರೀತಿಸುವ,
ಈ ಕೊಳಕು ಹುಡುಗನತ್ತ ನೋಡಿ ನಗು,
ಆದರೆ ನಾನು ಕಣ್ತೆರೆದು ಮುಚ್ಚಿದಾಗ,
ನನ್ನ ಹೆಜ್ಜೆಗಳು ಹೋಗುವಾಗ, ಮರಳಿದಾಗ
ನನಗೆ ಊಟ, ಗಾಳಿ, ಬೆಳಕು, ವಸಂತ ಯಾವುದೂ ಕೊಡಬೇಡ,
ಆದರೆ ನಿನ್ನ ನಗುವಿಂದ ಮಾತ್ರ ದೂರವಿಡಬೇಡ,
ನಿನ್ನ ನಗುವಿಲ್ಲದಿದ್ದರೆ, ನಾನು ಖಂಡಿತ ಬದುಕಿರಲಾರೆ.

ಮೂಲಕವಿ: ಪ್ಯಾಬ್ಲೊ ನೆರುಡ
ದೇಶ:  ಚಿಲಿ
1971 ಸಾಲಿನ ನೋಬೆಲ್ ಪ್ರಶಸ್ತಿ ವಿಜೇತರು


Your Laughter

Take bread away from me, if you wish,
take air away, but
do not take from me your laughter.

Do not take away the rose,
the lance flower that you pluck,
the water that suddenly
bursts forth in joy,
the sudden wave
of silver born in you.

My struggle is harsh and I come back
with eyes tired
at times from having seen
the unchanging earth,
but when your laughter enters
it rises to the sky seeking me
and it opens for me all
the doors of life.

My love, in the darkest
hour your laughter
opens, and if suddenly
you see my blood staining
the stones of the street,
laugh, because your laughter
will be for my hands
like a fresh sword.

Next to the sea in the autumn,
your laughter must raise
its foamy cascade,
and in the spring, love,
I want your laughter like
the flower I was waiting for,
the blue flower, the rose
of my echoing country.

Laugh at the night,
at the day, at the moon,
laugh at the twisted
streets of the island,
laugh at this clumsy
boy who loves you,
but when I open
my eyes and close them,
when my steps go,
when my steps return,
deny me bread, air,
light, spring,
but never your laughter
for I would die.

Pablo Neruda
Chile

Feb 24, 2012

ಶತಮಾನಕೆ ಸಾಕ್ಷಿಶತಮಾನದ ಸಾಕ್ಷಿಯಾಗಿ
ತಾರುಣ್ಯದ ಮೊಹರಿನಂತೆ
ಈ ಹೊಟೇಲಿನ ಕೋಣೆ
ಇಲ್ಲಿ ಬಂದು ಮಿಂದವರು
ಸಹಸ್ರಾರು
ನಾಯಕ, ಸೇವಕ,
ನಟ-ನಟಿಯರು,
ಪುಂಡರು, ಕಳ್ಳಕಾಕರರು,
ಕವಿ, ಕಲಾವಿದ, ಯಾತ್ರಿಕರೆಷ್ಟೋ
ತಂಗಿ, ತಡವರಿಸಿ, ತೂಗಿ, ತೇಲಾಡಿದವರು
ದಿಟ್ಟಿಸಿ, ಎದುಸಿರಿಂದ ನಿಟ್ಟುಸಿರಿಟ್ಟವರು
ನಿತ್ರಾಣಗೊಂಡು ಎದ್ದವರು,
ಬಿದ್ದವರು ಎಲ್ಲಿ, ಏಕೆ ಎಂಬ ಅರಿವಿರದೆ.
ಇದರ ದಿಂಬು, ಹಾಸಿಗೆ, ಮಂಚಗಳು
ಪರದೆ, ಹೊದಿಕೆಗಳು ಮಾಸಿ, ಮುರಿದು
ಬದಲಾದವುಗಲೆಷ್ಟೋ
ಇಲ್ಲೇ, ಇದೇ ಕೊಣೆಯೊಳಗೆ.
ಎಷ್ಟೊ ಕನಸುಗಳು, ಕೂಸುಗಳು ಕಸಿಯಾದವಿಲ್ಲಿ
ಅದರಲ್ಲಿ ಗರ್ಭಪಾತಗಳೆಷ್ಟೋ
ಉಳಿದವರು
ನಾಡಿಗೆ, ಕಾಡಿಗೆ
ಕೇಡು, ಕೊಡುಗೆಗಳಿತ್ತವರು ಎಷ್ಟೋ
ಇಲ್ಲಿ, ಪ್ರಣಯ ಪಕ್ಷಿಗಳ ಪ್ರಯೋಗಗಳು
ಅಂಚು-ಅಂಚಲ್ಲೂ ಮಿಂಚಿನ ಸಂಚಲನಗಳು,
ಸಂಚುಗಳು, ಮಾನಭಂಗಗಳು
ಎಷ್ಟೋ ಲೆಕ್ಕವಿಲ್ಲದಷ್ಟು
ಅಷ್ಟನ್ನೂ ಕಂಡು, ನುಂಗಿ ಅರಗಿಸಿಕೊಂಡ ನೀನು
ಇನ್ನೂ ಅಲ್ಲಾಡದಂತೆ, ನಿರ್ವಿಣ್ಣಗೊಂಡರೂ
ತೋರ್ಗೊಡದೆ, ತೇಜೋಮಯವಾಗಿ,
ರಾರಾಜಿಸುತ್ತಿರುವ ಗೋಡೆಗಳೆ...
ನಿಮ್ಮ ಸಹನೆ, ಸಂಯಮ, ಸಹಾನುಭೂತಿಯ
ಎಳ್ಳಷ್ಟಾದರೂ ಕರುಣಿಸಿ ಕೃತಾರ್ಥರಾಗಿ
ಹೊರಗೆ ಘಟಿಸುವುದನ್ನು
ಸಹಿಸಿಕೊಳ್ಳುವ ಸಲುವಾಗಿ.