Apr 2, 2022

ದೇವರು ಕಾಣೆಯಾಗಿದ್ದಾನೆ..!

ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿ.
ದೇವಾಲಯ ಇಂದು ಬ್ರಾಹ್ಮಣ್ಯದ ಬಯಲುರಂಗ ಮಂದಿರ,
ಅರ್ಚಕನ ಅಂಗಡಿ.
ಭಕ್ತಿಯ ಭಯೋತ್ಪಾದನೆಗೆ
ಈಗ ಭರ್ಜರಿ ವ್ಯಾಪಾರ.
ಭಕ್ತಿ ಭಯಕ್ಕೆ ಭಕ್ತ ಬೆಂಕಿಗಾಹುತಿ.
 
ಇವರ ಮೌಢ್ಯತೆಅವರ ಬಂಡವಾಳ,
ಇವರ ಅಂಧಶ್ರದ್ಧೆಅವರ ಜೀವಾಳ,
ಹಿಂದುಳಿದಶೂದ್ರಾತಿಶೂದ್ರದೀನ ದಲಿತ
ಮಾನಸಿಕ ಸಂಕೋಲೆತೊಟ್ಟ ಆಜೀವ ಜೀತದಾಳು.
ವಿವೇಚನೆವೈಚಾರಿಕತೆಸಾಮಾನ್ಯ ಅರಿವಿನ ಬೆರಗುಬೆಳಕಿನ 
ಸುಳಿವಿಲ್ಲದ ಶತಮೂರ್ಖನಿಗೆ
ಭಯಾನಕ ಸುಳಿಗೆ ಬೇಷರತ್
ಶರಣಾದ ಖುಷಿ.
ಪರಿಪರಿ ಬೂಟಾಟಿಕೆ,
ದೊಂಬರಾಟದ ಕುಣಿತಕ್ಕೆ
ದಣಿದು ದಿಕ್ಕೆಟ್ಟ ದರವೇಸಿ.
 
ದೇವರು ಎಂದೋ ಪರಾರಿ,
ಆಳುವವಆಡಿಸುವಾತನ ಕೈಗೊಂಬೆ,
ಒಮ್ಮೆ ಛದ್ಮವೇಷ,
ಮಗದೊಮ್ಮೆ ವಿವಸ್ತ್ರ ವಿಶೇಷ!
ತುತ್ತು ಅನ್ನಕ್ಕೆ,
ಸಣ್ಣ ಉದ್ಯೋಗಕ್ಕೆ ಸೀಮಿತ
ಬಡವನ ಬದುಕು-ಬವಣೆ.
 
ಅವರ ಪ್ರಚಂಡ ಪ್ರತಿಭೆ,
ಕುತಂತ್ರಗಳಿಗೆ -
ಬುದ್ಧ ಎಂದೋ ಪಲಾಯನಗೈದ,
ಬಸವ ಬಸವಳಿದು ಬಡವಾದ,
ಗಾಂದಿ ಗೂಡ್ಸೆ ಗುಂಡೇಟಿಗೆ ಸತ್ತ.
 
ಈ ಸಂದಿಗ್ಧ ಸನ್ನಿವೇಶದಲ್ಲೂ,
ಬೆಂಕಿಯಲ್ಲೇ ಅರಳಿದ ಬಾಬ ಸಾಹೇಬ,
ಸೋತು ಗೆದ್ದ ಬುದ್ಧ.
ಅವನ ಸಂವಿಧಾನನಮಗೆ ಜೀವದಾನ.
 
ಅವರು 
ಸಂವಿಧಾನಕ್ಕೆ ಲಗ್ಗೆಯಿಡುವ ಸಂಚು,
ಪೆರಿಯಾರ್ ಪ್ರಯತ್ನಗಳನ್ನತ್ತಿಕ್ಕುವ ಕನಸು,
ಅಸಹಾಯಕ ಅನ್ನದಾತನ ಬೀದಿಗಿಳಿಸಿದ ಯಶಸ್ಸು,
ಹೆಣಗಳ ರಾಶಿಗೆ ಸಾಕ್ಷಿ,
ನಮ್ಮ
ವಿಶ್ವಗುರುವಿನ ಕಾಶಿ!
 
ಯುವಕರಿಗೆ ಧರ್ಮದ ಅಫೀಮು,
ದಿನಕ್ಕೊಂದು ವಿನೂತನ ಪ್ರದರ್ಶನ.
ಪ್ರತಿಭಟನೆಗೆ ದರ್ಮದೇಟುದೇಶದ್ರೋಹಿ ಸರ್ಟಿಫಿಕೇಟು.
ಭಾರತಾಂಬೆಯ ಭವ್ಯಭವಿಷ್ಯಕ್ಕೆ ಕೊಲ್ಲಿಯಿಟ್ಟು 
ನರ್ತಿಸುವ ನರಹಂತಕರು.
 
ಮರೀಚಿಕೆಯಾಗಿದೆ ಮಾನವತ್ವ,
ಮಸುಕಾದ ಸತ್ಯದ ಪುಟ್ಟ ಅಣತೆ,
ಶತಮಾನಗಳ ಶೋಷಣೆಯ ಹುನ್ನಾರಕ್ಕೆ,
ಒಳಸಂಚಿನ ಸಂಕೀರ್ಣ ವಿನ್ಯಾಸಕ್ಕೆ,
ಅಮಾನವೀಯ ದಬ್ಬಾಳಿಕೆಗೆ,
ವಿಕೃತ ಅಟ್ಟಹಾಸಗಳಿಗೆ, ಅಪಮಾನಗಳ ಅಬ್ಬರಕ್ಕೆ
ಬಲಿಯಾದ ಅಸಂಖ್ಯ ಅಸಹಾಯಕ ಅಮಾಯಕ
ದಮನಿತರ ವಿವರಗಳ ಕುರುಹಿಲ್ಲದೇ
ಕುಡಿದು ಕುಣಿವ ನಿರಕ್ಷರ ಕುಕ್ಷಿಗಳು.
ಅವರ ಅಘೋಷಿತ ದರ್ಮಯುದ್ಧಕ್ಕೆ
ಈಗಲೂ ಬಡವಬಲ್ಲಿದನೇ ಏಕೈಕ ಆಯುಧ!

ದುಷ್ಠ ಜಾತೀಯತೆಯ ದುರ್ವಾಸನೆ ಉಸಿರುಗಟ್ಟಿಸುವ ಸ್ಥಿತಿಯಲ್ಲೂ,
ಅವರ ಪಂಚಾಮೃತ ಪ್ರಸಾದತೀರ್ಥತಿಳಕಗಳ ಕೈಚಳಕದಿಂದಲೇ
ಇವರ ಮೈಮನ ಪುಳಕ!
ಪ್ರತಿಗೆಲಸಕ್ಕೂ ಕಡ್ಡಾಯ ಅವರ ಸಲಹೆಸೂಚನೆ,
ಪ್ರಸ್ಥಕ್ಕೂಪರಿಣಯಕ್ಕೂಪಿಂಡ ಪ್ರದಾನಕ್ಕೂ,
ಪುಣ್ಯ ಪುರುಷಾರ್ಥಕ್ಕೂ 
ಗುದ್ದಲಿ ಪೂಜೆ,  ಗೃಹಪ್ರವೇಶಕ್ಕೂ,
ವಿಷಾದಕ್ಕೂ, ವಿವಾಹ ಶುಭ ಮಹೂರ್ತಕ್ಕೂ,
ಬೇಕು ಅವರ ಉಪಸ್ಧಿತಿ.  
ಇದೆಂತಾ ದುರ್ಗತಿ, ಹೀನ ದುಸ್ಥಿತಿ. 
ಇವರ ಸಂರಕ್ಷಣೆ ಈಗ ಅತ್ಯಗತ್ಯ,
ಅದಕ್ಕಾಗಿ ದೇವರು ಅನಿವಾರ್ಯ,
ದಯಮಾಡಿ ದೇವರ ಹುಡುಕಿಕೊಡಿ,
ಸೂಕ್ತ ಪರಿಹಾರ ಪಡೆಯಿರಿ.
 
-      ಚಂದಿನ