Nov 29, 2007

ನೆನಪು

ಬಿಚ್ಚಿಡುವೆ ಭಾವಗಳ
ಬಿಳಿಯ ಹಾಳೆಯ ಮೇಲೆ
ಮುಚ್ಚಿ ಹೋಗದಿರಲಿ
ನಾ ನಡೆದ ಹಾದಿಯಲಿ

ಒಲ್ಲದ ವಿಷಯಗಳ
ಮನದ ತಳಮಳಗಳನೆಲ್ಲ
ಕಟ್ಟಿಟ್ಟು ಒಮ್ಮೆಗೆ
ಎಸೆಯಲಿ ನಾ ಎಲ್ಲಿಗೆ

ಸಾಗಿಹುದು ಪಯಣ
ಎಲ್ಲ ನೆನಪುಗಳ ಹೊತ್ತು
ಇಲಿಸಲಾಗದ ಭಾರ
ನಿಲ್ಲದೆ ಪ್ರತಿದಿನ, ಪ್ರತಿಕ್ಷಣ

No comments: