Jul 23, 2009

ತುದಿಗಾಲ ತುಡಿತ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿಯ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು

ಪಂಚರಂಗಿ ಪರಮಾತ್ಮ ಆ ಮನೆಯೊಡೆಯ
ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೇ

ಮಿಡಿಗಾಯಿ ಮರದಲ್ಲಿ, ಸಂಯಮ ಬತ್ತಿರಲು
ರುಚಿ ನೋಡುವ ತವಕ ತುದಿಯಲ್ಲಿ ಕೊತ ಕೊತ
ಆಗ ನೋಟವೂ ಮಂಪರು, ಮಂಪರು

ತರ್ಕಕ್ಕೆ ನಿಲುಕದ ಅಂಗಾಂಗ ಪುಳಕ
ನಿಟ್ಟುಸಿರಿಡುವವರೆಗೂ ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ವಾಸ್ತವಕ್ಕೆ ಮರು ಪ್ರವೇಶ

5 comments:

shivu.k said...

ಕವನ ಅನೇಕ ಒಳಾ ಅರ್ಥಗಳನ್ನು ಹೊಂದಿದೆ...ಚೆನ್ನಾಗಿದೆ..

Ittigecement said...

ಚಂದಿನ...

ಕವನ ರಚನೆಯಲ್ಲಿ ನೀವು ನಿಸ್ಸಿಮರು...

ಬಹಳ ಸರಾಗವಾಗಿ ರಚಿಸಿ ಬಿಡುತ್ತೀರಿ...

ಕೊನೆಯ ಚರಣ ಬಹಳ ಇಷ್ಟವಾದವು...

ಅಭಿನಂದನೆಗಳು..
ಚಂದದ ಕವಿತೆಗೆ...

ಚಂದಿನ | Chandrashekar said...

ಶಿವು ಹಾಗು ಪ್ರಕಾಶ್ ಹೆಗಡೆಯವರಿಗೆ
ಧನ್ಯವಾದಗಳು

Guruprasad said...

ಚಂದಿನ... ತುಂಬ ಚೆಂದದ ಕವನ ಬರೆದಿದ್ದರ.....ತುಂಬ ಅರ್ಥ ಗರ್ಬಿಥ ವಾಗಿ ಇದೆ....:-)
ಕೀಪ್ ಇಟ್ ಅಪ್...

ಚಂದಿನ | Chandrashekar said...

ಧನ್ಯವಾದಗಳು ಗುರು ಅವರೆ,