ಬಿಂಬ - 51
ಜಗವೆಲ್ಲಾ ಮಾಯೆ
ನನ್ನವಳು ಅದರ ಛಾಯೆ...
ಬಿಂಬ - 52
ಅವಳ ತವಕ ತಲ್ಲಣಗಳೂ
ಸಹ ಪ್ರೀತಿಯ ಬಾಣಗಳು...
ಬಿಂಬ - 53
ಮದಿರೆಯೆ ದಾಹ
ನಿಯಂತ್ರಿಸುವುದು, ಅವಳ ಕಾಡುವ ಮೋಹ...
ಬಿಂಬ – 54
ಅವಳ ಮೌನ ರಾಗಗಳಗೆ,
ಹಾರುವ ಹಕ್ಕಿ ಉತ್ತರ ನೀಡಿದೆ...
ಬಿಂಬ – 55
ಅವಳ ನಗುವಲ್ಲೂ ನೋವನ್ನು
ಬಿಂಬಿಸುವ ಪರಿ, ಕಳವಳ ಮೂಡಿಸುತ್ತದೆ...
4 comments:
ತುಂಬಾ ಇಷ್ಟವಾದವು ಈ ಸಲದ ಬಿಂಬಗಳು...
wow super sir!!! tumbane chennagive ee baariya saalugaLu
ಚಂದಿನ,
ಎಂದಿನಂತೆ ನಿಮ್ಮ ಹನಿ-ಕವನ
ಹೋಗಲಾಡಿಸಿತು ನನ್ನ ತಲ್ಲಣ
ಬರೆಯುತ್ತಿರುವ ನಿಮ್ಮ ಹಾಯ್ಕು
ಓದುವ ಎಲ್ಲರಿಗೂ ಲಾಯಕ್ಕು
ಆತ್ಮೀಯ ಜ್ಯೋತಿ, ಮನಸು ಮೇಡಮ್ ಹಾಗು ಡಾ.ಗುರುಪ್ರಸಾದ್ ಅವರೆ, ನಿಮ್ಮ ಸತತ ಪ್ರೋತ್ಸಾಹವೇ ನನ್ನ ಪ್ರೇರಣೆ...
Post a Comment