Mar 25, 2011

ಆ ದಿನ

ಬೆತ್ತಲೆ ಮರಕ್ಕೆ
ಮೈದುಂಬಿಸಿಕೊಳ್ಳುವ
ಧಾವಂತ.

ಅಡಿಯಲ್ಲಿ
ರೆಕ್ಕೆ ಮುರಿದ ಹಕ್ಕಿಗೆ
ಕುಂಟ ಬೆಕ್ಕಿನ ಸಾಂತ್ವನ.

ನಲುಗಿದ
ಜಿರಲೆಗೆ ಮುತ್ತಿದ
ಇರುವೆಗಳ ಹಿಂಡು.

ಕಸದ ತೊಟ್ಟಿಗೆ ಎಸೆದ
ಮೂಳೆ, ಮಾಂಸಕ್ಕೆ
ಬೀದಿ ನಾಯಿಗಳ ಕಚ್ಚಾಟ.

ಪಕ್ಕದಲ್ಲಿ
ಕುಡಿದು ಕುಸಿದ
ಆಸಾಮಿಯ ನಿಲ್ಲಿಸಲು
ನೆಂಟರ ಅರೆಸಾಹಸ.

6 comments:

ಸಾಗರದಾಚೆಯ ಇಂಚರ said...

Sir

ಬೆತ್ತಲೆ ಮರಕ್ಕೆ
ಮೈದುಂಬಿಸಿಕೊಳ್ಳುವ
ಧಾವಂತ.

ಅಡಿಯಲ್ಲಿ
ರೆಕ್ಕೆ ಮುರಿದ ಹಕ್ಕಿಗೆ
ಕುಂಟ ಬೆಕ್ಕಿನ ಸಾಂತ್ವನ.

wow wow

ದಿನಕರ ಮೊಗೇರ said...

chennaagide ...

hige bareyuttiri...

ಮನಸು said...

wow sir... tumba chennagide saalugaLu vibhinnavagide

ಚಂದಿನ | Chandrashekar said...

ಡಾ.ಗುರುಪ್ರಸಾದ್, ದಿನಕರ ಮೊಗೇರ ಹಾಗು ಮನಸು ಮೇಡಮ್ ಅವರೆ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

ಶಿವಪ್ರಕಾಶ್ said...

tumba ista aytu sir :)

ಚಂದಿನ | Chandrashekar said...

ಧನ್ಯವಾದಗಳು ಶಿವಪ್ರಕಾಶ್ ಅವರೆ,

ನಿಮ್ಮ ಪ್ರೋತ್ಸಾಹಕ್ಕೆ...