Feb 14, 2013

"ಹುಚ್ಚು ಹುಡುಗಿಯ ಪ್ರೇಮ ಗೀತೆ



ನಾನು ಕಣ್ಮುಚ್ಚಿದೆ, ಇಡೀ ವಿಶ್ವ ಕುಸಿದು ಸತ್ತಿದೆ;
ನಾನು ರೆಪ್ಪೆ ತೆರೆದರೆ ಮತ್ತೆ ಜಗದ ಉದಯ.
(ನನ್ನೊಳಗೆ ನಿನ್ನ ರೂಪಿಸಿರುವೆ ಎಂದು ಭಾವಿಸುವೆ.)

ಚುಕ್ಕೆಗಳು ಕಡುನೀಲಿ, ಕೆಂಪಾಗಿ ನಿಧಾನಗತಿಯ ನೃತ್ಯದಿಂದ ಹೊರಹೊಮ್ಮುವವು,
ಮತ್ತು ನಿರಂಕುಶ ಕಗ್ಗತ್ತಲು ಭರದಿಂದ ಧಾವಿಸುತ್ತದೆ:
ನಾನು ಕಣ್ಮುಚ್ಚಿದೆ, ಇಡೀ ವಿಶ್ವ ಕುಸಿದು ಸತ್ತಿದೆ.

ಮರುಳುಮಾಡಿ ಹಾಸಿಗೆಗೆ ಕರೆದೆ ಎಂದು ಕನಸು ಕಂಡೆ
ಮತ್ತು ಹೊಳೆವ ಚಂದ್ರನಂತೆ ಹಾಡಿ, ಹುಚ್ಚನಂತೆ ಚುಂಬಿಸಿದೆ.
(ನನ್ನೊಳಗೆ ನಿನ್ನ ರೂಪಿಸಿರುವೆ ಎಂದು ಭಾವಿಸುವೆ.)

ದೇವರು ಉರುಳಿ ಬೀಳುವ ಆಗಸದಿಂದ, ನರಕದ ಜ್ವಾಲೆಗಳು ಮಂಕಾಗುತ್ತವೆ:
ದೇವಕನ್ಯೆಯರು,  ಸೈತಾನನ ಸೇವಕರು ನಿರ್ಗಮಿಸುವರು:
ನಾನು ಕಣ್ಮುಚ್ಚಿದೆ, ಇಡೀ ವಿಶ್ವ ಕುಸಿದು ಸತ್ತಿದೆ.

ನೀನು ಹಿಂದಿರುಗುವೆ ಎಂದು ಹೇಳಿದಂತೆ ನಾನು ಭ್ರಮಿಸಿದೆ,
ಆದರೆ ನನಗೆ ವಯಸ್ಸಾಗಿದೆ ಮತ್ತೆ ನಿನ್ನ ಹೆಸರು ಮರೆತಿದೆ.
(ನನ್ನೊಳಗೆ ನಿನ್ನ ರೂಪಿಸಿರುವೆ ಎಂದು ಭಾವಿಸುವೆ.)

ನಿನ್ನ ಬದಲು ಮೇಘ ಧ್ವನಿಯ ಹಕ್ಕಿಯನ್ನು ಪ್ರೀತಿಸಬಹುದಿತ್ತು;
ವಸಂತಋತುವಿನಲ್ಲಾದರೂ ಬಂದು ಮತ್ತೆ ಅವು ಮೊಳಗುತ್ತವೆ.
ನಾನು ಕಣ್ಮುಚ್ಚಿದೆ, ಇಡೀ ವಿಶ್ವ ಕುಸಿದು ಸತ್ತಿದೆ.
(ನನ್ನೊಳಗೆ ನಿನ್ನ ರೂಪಿಸಿರುವೆ ಎಂದು ಭಾವಿಸುವೆ.)"

ಮೂಲ : ಸಿಲ್ವಿಯಾ ಪ್ಲಾತ್ 

“Mad Girl's Love Song

I shut my eyes and all the world drops dead;
I lift my lids and all is born again.
(I think I made you up inside my head.)

The stars go waltzing out in blue and red,
And arbitrary blackness gallops in:
I shut my eyes and all the world drops dead.

I dreamed that you bewitched me into bed
And sung me moon-struck, kissed me quite insane.
(I think I made you up inside my head.)

God topples from the sky, hell's fires fade:
Exit seraphim and Satan's men:
I shut my eyes and all the world drops dead.

I fancied you'd return the way you said,
But I grow old and I forget your name.
(I think I made you up inside my head.)

I should have loved a thunderbird instead;
At least when spring comes they roar back again.
I shut my eyes and all the world drops dead.
(I think I made you up inside my head.)” 

- Sylvia Plath



No comments: