Apr 15, 2011

ಬಿಂಬ : 56 – 60

ಬಿಂಬ - 56
ಸಾಗರ ದಿಕ್ಕರಿಸಿ
ನಿತ್ಯ ಹರಿವ ನದಿ
ನಾಗರೀಕತೆ

ಬಿಂಬ - 57
ಬಿಡಿಸಲಾಗದ ಕಗ್ಗಂಟು
ಬಿಚ್ಚಿಟ್ಟ ನಂತರ ಬಾಳೆ ಸಿಪ್ಪೆ

ಬಿಂಬ - 58
ಕಣ್ ರೆಪ್ಪೆಗಳಲ್ಲಿ ಕಳೆದುಕೊಂಡದ್ದು
ಮೊಗೆದಷ್ಟೂ ಎಟುಕದ ವಿವರಗಳು

ಬಿಂಬ - 59
ಸುಡುಸುಡು ಬಿಸಿಲಿಗೆ ದಾಹ
ಬತ್ತಿದ ಬಾವಿಗೆ ಬೀಗ

ಬಿಂಬ - 60
ಕಾವ ಕರಗಿಸಿದ ಕಡಲು
ಸುನಾಮಿ ಅದರ ಸಿಡಿಲು

7 comments:

ಮನಸು said...

ಎಂತಾ ಅದ್ಭುತ ಸಾಲುಗಳು ಅವೇ ಬಿಂಬಿಸುತ್ತೆ ಅದರೊಳಗಣ ದಾಹ, ಧಗೆ, ಕಷ್ಟ ನೋವು ಎಲ್ಲವನ್ನು

ಸಾಗರದಾಚೆಯ ಇಂಚರ said...

sundaravo sundara sir

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್ ಹಾಗು ಡಾ.ಗುರುಪ್ರಸಾದ್ ಅವರೆ, ನಿಮ್ಮ ಮೆಚ್ಚುಗೆಗೆ...

Jyoti Hebbar said...

Superb......

ಚಂದಿನ | Chandrashekar said...

ಧನ್ಯವಾದಗಳು ಜ್ಯೋತಿಯವರಿಗೆ...

Beladingalu said...

ಸಾರ್ ನಿಮ್ಮ ಪದ್ಯಗಳು ಗಟ್ಟಿಯಾಗಿವೆ. .

ಚಂದಿನ | Chandrashekar said...

ಪ್ರಿಯ ವಿಜಯ್,

ನಮಸ್ಕಾರ, ಹೇಗಿದ್ದೀರಿ?

ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...