Nov 29, 2007

ನಾನು ನಾನಲ್ಲ

ಎಲ್ಲರಂತೆ ನಾನಲ್ಲ ಖಂಡಿತ
ನೀವು ಅರಿತಂತೆಯೂ ನಾನಿಲ್ಲ
ನನ್ನ ನಾನು ಇನ್ನೂ ತಿಳಿದೇ ಇಲ್ಲ
ನಿಜವಾಗಲೂ ನಾನು ನಾನಾಗಲಿಲ್ಲ.

ಪರರ ಪರದೆಗಳ ಅರಿವು
ಸತತ ನಟನೆಯ ಸೆಳವು
ಊರು ಸುತ್ತಿಸುವ ಅಭ್ಯಾಸ
ಏಕೋ ನನಗೆ ಕಷ್ಟಸಾಧ್ಯ

ಪಯಣದಲಿ ಆಗಾಗ
ಜೊತೆಯಾದವರೂ ಸಹ
ಸೂಕ್ಷ್ಮವಾಗಿ ತಿಳಿಸಲು ಬಯಸಿ
ಜಾರಿ ಹೋದರು ಹಾಗೇ ಹರಸಿ

ನೆನಪು

ಬಿಚ್ಚಿಡುವೆ ಭಾವಗಳ
ಬಿಳಿಯ ಹಾಳೆಯ ಮೇಲೆ
ಮುಚ್ಚಿ ಹೋಗದಿರಲಿ
ನಾ ನಡೆದ ಹಾದಿಯಲಿ

ಒಲ್ಲದ ವಿಷಯಗಳ
ಮನದ ತಳಮಳಗಳನೆಲ್ಲ
ಕಟ್ಟಿಟ್ಟು ಒಮ್ಮೆಗೆ
ಎಸೆಯಲಿ ನಾ ಎಲ್ಲಿಗೆ

ಸಾಗಿಹುದು ಪಯಣ
ಎಲ್ಲ ನೆನಪುಗಳ ಹೊತ್ತು
ಇಲಿಸಲಾಗದ ಭಾರ
ನಿಲ್ಲದೆ ಪ್ರತಿದಿನ, ಪ್ರತಿಕ್ಷಣ

Nov 27, 2007

ಯಾರು ಹಿತವರು?

ಯಾರು ಹಿತವರು
ನಮಗೆ ಈ ಮೂವರೊಳಗೆ
ಜೆ ಡಿ ಎಸ್ಸಾ, ಬಾ ಜ ಪಾ,
ಇಲ್ಲಾ ಕಾಂಗ್ರೆಸ್ಸಾ


ಒಬ್ಬರು ಸಂಸಾರಕ್ಕಾಗಿ
ಇನ್ನೊಬ್ಬರು ಧರ್ಮಕ್ಕಾಗಿ
ಮತ್ತೊಬ್ಬರು ಅಲ್ಪರಿಗಾಗಿ
ಯಾರಿಹರು ನಮಗಾಗಿ


ಇವರ ಸಿದ್ಧಾಂತ
ರಗಡ ರಾದ್ದಾಂತ
ಎಂದು ಆದೇವು ನಾವು
ಮುಕ್ತ ಮುಕ್ತ ಮುಕ್ತಾ


ಇವರ ನಂಬಿ ಕೆಡದವರಿಲ್ಲ
ಎಮಗೆ ಬೇರೆ ವಿಧಿ ಇಲ್ಲ
ಏನು ಮಾಡಲಿ ಎನ್ನ
ಶ್ರೀಚನ್ನಮಲ್ಲಿಕಾರ್ಜುನ

ನೀ ಯಾರಂತ?*

ಹನಿ ಹನಿ ಮಳೆಯಲಿ
ತೋಯುತ ನಡೆಯಲಿ
ಕೊಚ್ಚೆ ಕೊಸರಿನಲಿ
ಹೆಜ್ಜೆ ಬಿರುಸಿನಲಿ.

ಡವ ಡವ ಬಡಿದಿದೆ
ಎದೆ ಮಿಡಿತ
ಸರ ಸರ ನಡೆದಿದೆ
ಕಾಲ್ನಡೆತ.

ಅಲ್ಲಿಂದಿತ್ತ ಇಲ್ಲಿಂದತ್ತ
ಜಿಗಿಯುತ ಹಾರುತ
ಹೊರಟಿರುವೆ ನೀನು
ಯಾರ ಮನೆಯತ್ತ.

ನನ್ನ ಮನಸಿನಲಿ
ಎದ್ದ ಬಿರುಗಾಳಿಯ
ಹೇಗೆ ಬಣ್ಣಿಸಲಿ
ಹೇಳು ನವಿಲೇ.

Nov 21, 2007

ರಾಜಕೀಯ ದೊಂಬರಾಟ - ಒಂದು ನೋಟ.

ಜಾತಿ ರಾಜಕಾರಣಿಗಳು, ಜಾತಿ ಸಾಹಿತಿಗಳು ಹಾಗು ಜಾತಿ ಸ್ವಾಮೀಜಿಗಳು ಜತ್ಯಾತೀತತೆಯ ಮುಖವಾಡ ಹೊತ್ತು ವಿಜ್ರು೦ಭಿಸುತ್ತಿರುವ ನಮ್ಮ ದೇಶದಲ್ಲಿ, ಅದರಲ್ಲೂ ಇವರೆಲ್ಲರ ಪ್ರಭಾವ ಶ್ರೀಮಂತವಾಗಿರುವ ನಮ್ಮ ರಾಜ್ಯದಲ್ಲಿ, ಈಗ ರಾಜ್ಯದಲ್ಲಿ ಘಟಿಸುತ್ತಿರುವ ರಾಜಕೀಯ ಬೆಳವಣಿಗೆಗಳು ಇವರೆಲ್ಲರ ಬಣ್ಣ ಕಳಚಲು ಒಂದು ವೇದಿಕೆಯಾಗಿದೆ. ಇವೆಲ್ಲವನ್ನು ಕಾಣುವ, ಕೇಳುವ ಹಾಗು ಆಸ್ವಾಧಿಸುವ ಭಾಗ್ಯ ನಮ್ಮದಾಗಿದೆ.


ಇವರೆಲ್ಲರ ಚಟುವಟಿಕೆಗಳನ್ನು ಸಹಜವಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯರು, ಬಹಳ ಗಂಭೀರವಾಗಿ ಗಮನಿಸಬಲ್ಲ ಬುಧ್ಧಿಜೀವಿಗಳು ಹಾಗು ವಿಶೇಷವಾಗಿ ಅದನ್ನೇ ಉದ್ಹ್ಯೋಗವಾಗಿರಿಸಿಕೊಂಡ ಮಾಧ್ಯಮದವರು ಇದ್ದಾರೆಂಬ ಅರಿವಿಲ್ಲದಹಾಗೆ ಇವರ ಪ್ರತಿಭೆಯ ಪ್ರದರ್ಶನ ಮನರಂಜನೆಯ ಜೊತೆಗೆ ಸತ್ಯವನ್ನೂ ಹೊರತರಿಸಿತ್ತು.

ಈ ಸಂದರ್ಭವನ್ನು, ಒಂದು ಅವಕಾಶವಾಗಿ ಸ್ವೀಕರಿಸಿದ ನಮ್ಮ ಮಾಧ್ಯಮ ಮಿತ್ರರಿಗೆ ಹಾಗು ಅದರಲ್ಲೂ ವಿಶೇಷವಾಗಿ, ದೃಶ್ಯ ಮಾಧ್ಯಮದವರು, ಈ ಸಮಗ್ರ ಚಿತ್ರಣವನ್ನು ಭಿಂಬಿಸಿದ ಪರಿ ಅಮೋಘವಾಗಿತ್ತು. ಇವರೆಲ್ಲರ ಸೇವೆ ಪ್ರಶಂಸನೀಯ.

ಪ್ರಸಕ್ತ ರಾಜಕೀಯ - ನನ್ನ ಅನಿಸಿಕೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ ನಾವು ಸ್ಪಶ್ಟವಾಗಿ ಕೆಲವು ಅ೦ಶಗಳನ್ನು ಗಮನಿಸಬಹುದು.
ಮೊದಲಿಗೆ, ಯಾವ ಪಕ್ಶ್ಯವೂ ಅವರ ಸಿಧ್ಧಾ೦ತಕ್ಕೆ ಬದ್ದರಲ್ಲ, ಅಥವಾ ಅದರ ಅವಶ್ಯವಿದೆಯೆ ಎ೦ಬ ಪ್ರಶ್ನೆ ಭಾಗಶಹ ಅವರ ಮು೦ದೆ ಇದೆ?

ಎರಡನೆಯದಾಗಿ, ಮೌಲ್ಯಗಳ ಕೊರತೆ ಹಾಗು ಅವುಗಳ ಪಾಲನೆ, ಕರ್ಯರೂಪದಲ್ಲಿ ಬಿ೦ಬಿಸುವ ಮನಸ್ತಿತಿಯು ಇಲ್ಲದಿರುವುದು.

ಮೊರನೆಯದಾಗಿ, ಅಧಿಕಾರಕ್ಕಾಗಿ ಯಾವ ಹ೦ತಕ್ಕಾದರೂ, ಯಾವುದಕ್ಕಾದರೂ ಸರಿಯೆ ಎ೦ಬ ಭ೦ಡತನ, ಸ್ವಾರ್ಥ ಹಾಗು ಕೆಟ್ಟ ದುರಾಸೆ.

ಈ ಪ್ರಸ್ತುತ ರಾಜಕೀಯ ವಿದ್ಯಮಾನಗಳಿ೦ದ ಪ್ರಪ೦ಚದೆಲ್ಲೆಡೆ ಹೆಚ್ಚಾಗಿ ಗೌರವಿಸುವ ಪ್ರಜಾತ೦ತ್ರಕ್ಕೆ ಧಕ್ಕೆಯಿಟ್ಟ೦ತೆ ಭಾಸವಾಗುತ್ತಿದೆ.

ಈ ಪರಿಸ್ತಿತಿಯನ್ನು ಕಾಣುತ್ತಾ, ಅನುಭವಿಸುತ್ತಾ, ಅದನ್ನೇ ಆರಿಸುವ ದಯನೀಯ, ದುಸ್ಥಿತಿ ನಮ್ಮ ಸಾಮಾನ್ಯ ಜನತೆಗೆ ಇರುವ ದೌರ್ಭಾಗ್ಯ ಹಾಗು ಅಸಹಾಯಕತೆ.

Nov 17, 2007

My Quotes

"Leader is not the one, who remains as a leader.
Leader is the one, who creates leaders."
***
"The one who has no problems in life

is the one who has no life."

***

"If you want to enjoy a drink? Take it in limits.

If you want others to enjoy at you? Tak it in excess."

***
" Why do you seek job security?

When there is no security for life."

***

Nov 15, 2007

Religion is the Reason

to like or to dislike me
to identify or not to
to encourage or to discourage
to accept or to reject
to love me or to hate
to live or to die
please give me
a chance,
to exist in peace,
where there is no caste,
creed, color, religion.
just call me a person and
i am a human.