Nov 21, 2007

ರಾಜಕೀಯ ದೊಂಬರಾಟ - ಒಂದು ನೋಟ.

ಜಾತಿ ರಾಜಕಾರಣಿಗಳು, ಜಾತಿ ಸಾಹಿತಿಗಳು ಹಾಗು ಜಾತಿ ಸ್ವಾಮೀಜಿಗಳು ಜತ್ಯಾತೀತತೆಯ ಮುಖವಾಡ ಹೊತ್ತು ವಿಜ್ರು೦ಭಿಸುತ್ತಿರುವ ನಮ್ಮ ದೇಶದಲ್ಲಿ, ಅದರಲ್ಲೂ ಇವರೆಲ್ಲರ ಪ್ರಭಾವ ಶ್ರೀಮಂತವಾಗಿರುವ ನಮ್ಮ ರಾಜ್ಯದಲ್ಲಿ, ಈಗ ರಾಜ್ಯದಲ್ಲಿ ಘಟಿಸುತ್ತಿರುವ ರಾಜಕೀಯ ಬೆಳವಣಿಗೆಗಳು ಇವರೆಲ್ಲರ ಬಣ್ಣ ಕಳಚಲು ಒಂದು ವೇದಿಕೆಯಾಗಿದೆ. ಇವೆಲ್ಲವನ್ನು ಕಾಣುವ, ಕೇಳುವ ಹಾಗು ಆಸ್ವಾಧಿಸುವ ಭಾಗ್ಯ ನಮ್ಮದಾಗಿದೆ.


ಇವರೆಲ್ಲರ ಚಟುವಟಿಕೆಗಳನ್ನು ಸಹಜವಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯರು, ಬಹಳ ಗಂಭೀರವಾಗಿ ಗಮನಿಸಬಲ್ಲ ಬುಧ್ಧಿಜೀವಿಗಳು ಹಾಗು ವಿಶೇಷವಾಗಿ ಅದನ್ನೇ ಉದ್ಹ್ಯೋಗವಾಗಿರಿಸಿಕೊಂಡ ಮಾಧ್ಯಮದವರು ಇದ್ದಾರೆಂಬ ಅರಿವಿಲ್ಲದಹಾಗೆ ಇವರ ಪ್ರತಿಭೆಯ ಪ್ರದರ್ಶನ ಮನರಂಜನೆಯ ಜೊತೆಗೆ ಸತ್ಯವನ್ನೂ ಹೊರತರಿಸಿತ್ತು.

ಈ ಸಂದರ್ಭವನ್ನು, ಒಂದು ಅವಕಾಶವಾಗಿ ಸ್ವೀಕರಿಸಿದ ನಮ್ಮ ಮಾಧ್ಯಮ ಮಿತ್ರರಿಗೆ ಹಾಗು ಅದರಲ್ಲೂ ವಿಶೇಷವಾಗಿ, ದೃಶ್ಯ ಮಾಧ್ಯಮದವರು, ಈ ಸಮಗ್ರ ಚಿತ್ರಣವನ್ನು ಭಿಂಬಿಸಿದ ಪರಿ ಅಮೋಘವಾಗಿತ್ತು. ಇವರೆಲ್ಲರ ಸೇವೆ ಪ್ರಶಂಸನೀಯ.

No comments: