ಕೂಗು...
ಎನ್ನ ಮನುಕುಲಕೆ!!!
Nov 29, 2007
ನಾನು ನಾನಲ್ಲ
ಎಲ್ಲರಂತೆ ನಾನಲ್ಲ ಖಂಡಿತ
ನೀವು ಅರಿತಂತೆಯೂ ನಾನಿಲ್ಲ
ನನ್ನ ನಾನು ಇನ್ನೂ ತಿಳಿದೇ ಇಲ್ಲ
ನಿಜವಾಗಲೂ ನಾನು ನಾನಾಗಲಿಲ್ಲ.
ಪರರ ಪರದೆಗಳ ಅರಿವು
ಸತತ ನಟನೆಯ ಸೆಳವು
ಊರು ಸುತ್ತಿಸುವ ಅಭ್ಯಾಸ
ಏಕೋ ನನಗೆ ಕಷ್ಟಸಾಧ್ಯ
ಪಯಣದಲಿ ಆಗಾಗ
ಜೊತೆಯಾದವರೂ ಸಹ
ಸೂಕ್ಷ್ಮವಾಗಿ ತಿಳಿಸಲು ಬಯಸಿ
ಜಾರಿ ಹೋದರು ಹಾಗೇ ಹರಸಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment