Jan 23, 2013

ಸಭ್ಯತೆಯ ಹೊಗಳುವ ಕುಡುಕ



ಹಾಡಿ ಕುಣಿಸು ಬಾ, ನನ್ನ ಆಪ್ತ ಗೆಳೆಯನೆ.
ಹಾಗೇ ನನ್ನ ಕುಣಿಸುತ್ತಲೇ ಇರು.
ನಾನು ಸಭ್ಯನಂತೆ ಕಂಡರೂ, ಗಂಟಲು ಪೂರ್ತಿ ಕುಡಿದಿರುವೆ.
ಸಭ್ಯತೆಯೊಂದು ಆಭರಣ
ಅದನ್ನು ನಾನು ಬಹಳ ಮೆಚ್ಚಿಕೊಳ್ಳುವೆ;
ಆದ್ದರಿಂದಲೇ ನನ್ನ ಕುಣಿಸುತ್ತಲೇ ಇರು
ಕುಡುಕರು ಸುಳ್ಳು ಹೇಳಿದರೂ, ಗೊರಕೆ ಹೊಡೆದರೂ ಪರವಾಗಿಲ್ಲ.
ನಿನ್ನ ಹೆಜ್ಜೆಯ ಬಗ್ಗೆ ಎಚ್ಚರವಿರಲಿ, ಹೆಜ್ಜೆಯ ಬಗ್ಗೆ ಎಚ್ಚರ.
ಅಲೆಗಳಂತೆ ಕುಣಿಯುತ್ತಿರು.
ಹಾಗೆ ಕುಣಿಯುವ ಪ್ರತಿಯೊಬ್ಬನ ಕಾಲ ಕೆಳಗೆ
ಸತ್ತವನ ಸಮಾಧಿಯಿರುತ್ತದೆ.
ಏನೇ ಏರಿಳಿತಗಳಿದ್ದರೂ ಆಪ್ತನೆ,
ಮತ್ಸ್ಯಕನ್ಯೆಯಂತಿರು, ಸೋತ ದರವೇಸಿಯಂತಲ್ಲ;
ಕುಡುಕ ಸತ್ತವ.
ಮತ್ತೆ ಸತ್ತವರೆಲ್ಲರೂ ಕುಡಿದಿದ್ದಾರೆ.

 -   ವಿಲಿಯಮ್ ಬಟ್ಲರ್ ಯೇಟ್ಸ್


A Drunken Man’s Praise of Sobriety

COME swish around, my pretty punk,
And keep me dancing still
That I may stay a sober man
Although I drink my fill.
Sobriety is a jewel
That I do much adore;
And therefore keep me dancing
Though drunkards lie and snore.
O mind your feet, O mind your feet,
Keep dancing like a wave,
And under every dancer
A dead man in his grave.
No ups and downs, my pretty,
A mermaid, not a punk;
A drunkard is a dead man,
And all dead men are drunk.

William Butler Yeats
(1865-1939 / County Dublin / Ireland)

No comments: