ಬಿಂಬ – 46
ಕಲ್ಲು ಬೀಸಿದ್ದು ಕಾಯಿಗೆ
ಬಿದ್ದದ್ದು ಹಣ್ಣು
ನಂತರ ಪಾಪ ಪಶ್ಚಾತ್ತಾಪ...
ಬಿಂಬ – 47
ಎಲ್ಲರನ್ನೂ ನಿರಂತರ
ಕಾಡುವುದು ಯಾವುದಾದರೂ
ಒಂದು ಹಸಿವು...
ಬಿಂಬ – 48
ನಲ್ಲೆ
ಚಳಿಗಾಲದಲ್ಲಿ
ಎಲ್ಲದಕ್ಕೂ ಮಿಗಿಲು
ನಿನ್ನ ಆಲಿಂಗನ
ಬಿಂಬ – 49
ಒಮ್ಮೆಗೆ,
ಸ್ವರ್ಗವನ್ನೂ ಸಹ ಮರೆಯಬಹುದು,
ಕಾವ್ಯ, ಮದ್ಯ, ಇಲ್ಲಾ ಮಹಿಳೆ
ಸದಾ ಇವರ ನಶೆಯಲ್ಲಿರುವವರು.
ಮತ್ತೆ ಇವರನ್ನು ಕಂಡಾಗ
ಬಹಳ ಸಭ್ಯರೂ ಕೂಡ ತೀವ್ರ ಅಸೂಯೆಯಿಂದ,
ತಮ್ಮ ಅಸಹಾಯಕತೆಗೆ ಮರುಗುತ್ತಾರೆ.
ಬಿಂಬ – 50
ಕ್ಷಮಿಸಿ...
ಕಾಫಿ, ಸಿಗರೇಟ್, ಗರ್ಭನಿರೋಧಕಗಳು
ಮತ್ತೆ ಎಲ್ಲಕ್ಕಿಂತಲೂ ಮುಖ್ಯವಾಗಿ ಮದ್ಯಸಾರ!
ಪ್ರತಿ ಚಳಿಗಾಲದಲ್ಲಿ ತಮ್ಮ ನಿರಂಕುಶ ಅಧಿಕಾರ ಚಲಾಯಿಸುತ್ತವೆ.
4 comments:
ಸರ್,
ಬಿಂಬ ೪೯ ಬಹಳ ಖುಷಿ ಕೊಟ್ಟಿತು
ನಿಮ್ಮ ಚುಟುಕಗಳಲ್ಲಿ ನಗೆಯ ಟಾನಿಕ್ಕಿದೆ
ನಗೆ ತರಿಸಿತು ನಿಮ್ಮ ಸಾಲುಗಳು ಚೆನ್ನಾಗಿವೆ ಧನ್ಯವಾದಗಳು
ಆತ್ಮೀಯ ಡಾ.ಗುರುಮೂರ್ತಿ ಹಾಗು ಮನಸು ಮೇಡಮ್,
ಧನ್ಯವಾದಗಳು...
Super bimbagalu. Sogasagive
Post a Comment