ನನ್ನ ನೆರಳಿಗೆ ಮುಪ್ಪಿಲ್ಲ,
ನೆನಪುಗಳಂತೆ
ಇವರು ನನ್ನ ಎಂದೂ ತೊರೆಯಲೊಲ್ಲದ,
ತಕರಾರಿಲ್ಲದ ಜೊತೆಗಾರರು.
ಇವರೊಂದಿಗೆ ನಿತ್ಯ ಬಂದು ಹೋಗುವ
ಆತ್ಮೀಯ ಅತಿಥಿ
ಕನಸು.
ಹಗಲಿಗೆ ನೆರಳು, ನೆನಪು
ಇರುಳಿಗೊಂದು ಕನಸು.
ಇವರೆ,
ನನ್ನೊಂದಿಗೆ ಹುಟ್ಟಿಸಾಯುವ
ಅಸಹಾಯಕರೊ, ಅದೃಷ್ಟವಂತರೊ
ಇಲ್ಲಾ ಯಾವದೋ ಅನಿವಾರ್ಯತೆಯ ಸೃಷ್ಟಿ
ಅವರಂತೆ ನಾನು...
5 comments:
ಚಿಕ್ಕದಾಗಿ ಚೊಕ್ಕದಾಗಿದೆ
ಚೆನ್ನಾಗಿದೆ... ವಾಹ್!! ನಿಜ ಸರ್ ನೆರಳು ಯಾರು ಬಿಟ್ಟರು ನಮ್ಮ ಜೊತೆ ಅದು ಬಿಡೋಲ್ಲ.
ಡಾ.ಗುರುಪ್ರಸಾದ್ ಅವರೆ ಮತ್ತು ಮನಸು ಮೇಡಮ್,
ನಿಮ್ಮ ಸತತ ಪ್ರೋತ್ಸಾಹಕ್ಕೆ ಧನ್ಯವಾದಗಳು...
ತುಂಬ ತುಂಬಾ ತುಂಬಾ ಇಷ್ಟವಾಯ್ತು...ಎಲ್ಲೋ ಒಂದೆಡೆ ಆಧ್ಯಾತ್ಮದ ಚಿಕ್ಕ ಸುಳಿವು ಸುಳಿದಂತಿದೆ....
ಧನ್ಯವಾದಗಳು ಜ್ಯೋತಿಯವರೆ,
ನಿಮ್ಮ ಪ್ರೋತ್ಸಾಹ ಹೀಗೇ ಹರಿಯುತ್ತಿರಲಿ...
Post a Comment