Jun 28, 2010

ಹೀಗೇಕೆ?

ಮುಸ್ಸಂಜೆ
ಬಾಡಿದ ಮೊಗಗಳ ಸಂತೆಯಲಿ
ಉಮ್ಮಸ್ಸಿನ ಕಿಚ್ಚೊತ್ತವರು
ಕುಡುಕರು ಮತ್ತೆ ...

ನಡುರಾತ್ರಿಯಲ್ಲೂ
ಸೆಳೆಯುವ ಸವತಿಯರು
ಬೆಳಕೊಮ್ಮಿಸಿ ಬಾಯ್ತೆರೆದ ಬಾರುಗಳು...

ಕತ್ತಲೊಳಗೆ ಕಿಂದರಜೋಗಿಯ
ಹಾಡು ಕೇಳುವ ಧಾವಂತ
ಏಕಾಂಗಿ,
ಆದರೂ ಅಂಗಾಂಗ ಪುಳಕ...

ಸೋತರು ಸರಿಯೆ
ಹೋಗುವ ಮೊದಲೊಮ್ಮೆ
ಎಲ್ಲಬದಿಗಳೂ ತಡಕುವ ತವಕ...

3 comments:

ಸಾಗರದಾಚೆಯ ಇಂಚರ said...

ಸಕತ್ತಾಗಿದೆ ಸರ್

ಮನಸು said...

ಚಂದಿನ ಸರ್, ಬಹಳ ದಿನಗಳ ನಂತರ ಕವನ ಬಂದಿದೆ ಚೆನ್ನಾಗಿದೆ........

ಕುಡಿತದ ಮತ್ತಿನಲ್ಲಿ ತಡಕುವ ತವಕ ಇದ್ದೇರುತ್ತೆ. ಕುಡಿತದ ನಿಶೆ ಇಳಿದನಂತರ ಗೊತ್ತಗುತ್ತೆ ತಡಕುವ ತವಕವೇಕೆ ಎಂಬುದು ಅಲ್ಲವೇ........

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಹಾಗು ಮನಸು ಮೇಡಮ್ !