Feb 14, 2008

ರಾಜ್ ಠಾಕ್ರೆ ಬುಲಾವ್

ಯು ಪಿ ಬಿಹಾರಿ ಬಗಾವ್
ಮರಾಠಿ ಮಾನೂಸ್ ಜಗಾವ್
ಅಪ್ಲಿ ಮಹಾರಾಷ್ಟ್ರ ಬಚಾವ್
ಇದು ರಾಜ್ ಠಾಕ್ರೆ ಬುಲಾವ್

ಬಚ್ಚನ್ ಕೋ ಯು ಪಿ ಕಾ ರಸ್ತಾ ದಿಕಾವ್
ಚ್ಚಟ್ ಪೂಜಾ ತುರಂತ್ ರುಕುವಾವ್
ಅಪ್ಲಿ ಮರಾಠಾ ಜರೂರ್ ಬಚಾವ್
ಇದೂ ರಾಜ್ ಠಾಕ್ರೆ ಬುಲಾವ್

ದೃಶ್ಯ ಮಾದ್ಯಮದಲ್ಲಿ ದಿನ ಪೂರ್ತಿ
ಪತ್ರಿಕೋದ್ಯಮದಲ್ಲಿ ಪುಟ ಪೂರ್ತಿ
ರಾಜಕಾರಣಕ್ಕೆ ಇದೇ ಹೈಲೈಟ್
ಬುದ್ಧಿಜೀವಿಗಳು ಇದರಲ್ಲೇ ಟೈಟ್

ರಾಜ್ ಠಾಕ್ರೆ ಹೊಡೆದ ಸಿಕ್ಸರ್
ಒಂದೇ ದಿನದಲಿ ಆದ ಪಾಪ್ಯುಲರ್
ಇರುವ ವ್ಯವಸ್ಥೆಗೆ ಕೊಟ್ಟು ಕೊಕ್
ಮಾಡಿದ ನೋಡಿ ಎಂಥಾ ಜೋಕ್

ಅವಸರದಿ ಮಾಡಿದ ಅಡಿಗೆಯನು
ಉದ್ವೇಗದಿ ಬಡಿಸಿದರು ಜನತೆಗೆ
ಅಲ್ಪನ ವುರುಳಿಲ್ಲದ ಹೇಳಿಕೆಗಳನು
ತಿರುಳಿಲ್ಲದೆ ಕೊಡುವ ಆತುರ ನಿಮಗೆ

ವೇಗಕ್ಕೆ ಕೊಟ್ಟು ಎಲ್ಲಾ ಪ್ರಾಮುಖ್ಯತೆ
ಜ್ಞಾನಕ್ಕೆ ಯಾಕಿಲ್ಲ ಸಾಕಷ್ಟು ಆದ್ಯತೆ
ಕಡಿವಾಣವಿಲ್ಲದ ಕುದುರೆಯ ಓಟಕ್ಕೆ
ಬಳಸಿಕೊಂಡಾರು ಅವರವರ ಆಟಕ್ಕೆ

ನಾಳೆ ಇವನಾಗುವ ಮಾದರಿ ನಾಯಕ
ಪುಂಡ ಪೋಕರಿಗೆಲ್ಲ ಇವನೇ ಪೋಷಕ
ಹೆಮ್ಮರವಾಗಿ ಬೆಳೆದಾನು ತೊಟ್ಟು ಕನ್ನಡಕ
ಓಡಿಸುವ ದೇಶದೆಲ್ಲೆಡೆ ಇವನದೇ ಜಟಕಾ

ವಿಷಯದಾಳಕೆ ಒಮ್ಮೆ ದಿಟ್ಟಿಸಿ ನೋಡಾ
ಜಾರದಿರು ಕಾತುರದಿ ಸಂಯಮದ ಜಾಡ
ದೂರ ದೃಷ್ಟಿಯ ಕೊರತೆ ಇದಕೆ ಕಾರಣ
ಕಗ್ಗತ್ತಲಲಿ ಹಣತೆಯ ಬೆಳಗು ನೀ ಜಾಣ

ಭಾರತಾಂಬೆಯ ಮುಖಕೆ ಮಸಿಯಿಡಲು
ಹೊಂಚುತಿಹರು ಎಲ್ಲೆಡೆ ಇರಲಿ ಕಟ್ಟೆಚ್ಚರ
ಸೂಕ್ಷ್ಮ- ಅತೀ-ಸೂಕ್ಷ್ಮಗಳ ಅರಿತು ನೀನು
ಮುಗ್ದ ಜನತೆಗೆ ನೀ ಸರಿದಾರಿ ತೋರಾ

No comments: