Feb 29, 2008

ಚುನಾವಣಾ ಮುನ್ಸೂಚನೆ

ಬಂತು ಬಜೆಟ್ ಎರಡು ಸಾವಿರದೆಂಟು
ತಂದಿದೆ ಎಲ್ಲರಿಗೂ ಸಂತಸದ ಗಂಟು
ಖಚಿತ ಚುನಾವಣೆಯಾ ಮುನ್ಸೂಚನೆ
ಮತದಾತರೆಲ್ಲರನೊಲಿಸುವ ಆಚರಣೆ

ರೈಲ್ವೇ ಲಾಲು ರೈಲು ಬಿಟ್ಟ ನಂತರ
ವಿತ್ತ ಸಚಿವ ಚಿದಂಬರಂ ಚಮತ್ಕಾರ
ದೇಶದ ಸಮಗ್ರ ಆರ್ಥಿಕ ಅಭಿವೃದ್ದಿ
ಎಲ್ಲಾ ಕ್ಷೇತ್ರಗಳಿಗೆ ನೀಡಿ ಸಿಹಿಸುದ್ದಿ

ದೇಶಕೆ ಮೊಟ್ಟ ಮೊದಲ ಭಾರಿಗೆ
ಭಾರೀ ರಿಯಾಯಿತಿ ನಮ್ಮ ರೈತರಿಗೆ
ಕೃಷಿ ವಲಯ ಕುಸಿತದ ತಡೆಗೆ ಯತ್ನಿಸಿ
ರೈತರ ಮುಖದಲಿ ನಗುವ ಕಾಣಲಿಚ್ಚಿಸಿ

ಅಲ್ಪ ಸಂಖ್ಯಾತರಿಗೆ ದುಪ್ಪಟ್ಟು ಹಣಕಾಸು
ಶಿಕ್ಷಣ ಕ್ಷೇತ್ರಕೆ ನೀಡಿ ಸಾಕಷ್ಟು ಆಧ್ಯತೆ
ಆರೋಗ್ಯ ರಕ್ಷಣೆಗೆ ಮನಗೊಟ್ಟು ಕೊನೆಗೆ
ಎಲ್ಲರ ಮನವೊಲಿಸಿ ಮತಗಳಿಸುವಾಸೆಗೆ

ಕಡುಬಡವರಿಗೆ ಆರೋಗ್ಯ ವಿಮೆ ಯೋಜನೆ
ಮುವತೈದು ಸಾವಿರ ಸಬ್ಸಿಡಿ ಕಟ್ಟಲು ಮನೆ
ಸಾಲ ನೀಡಿ ಮಹಿಳಾ ಸ್ವಸಹಾಯ ಗುಂಪಿಗೆ
ಬಲ ಜೀವನ ಸುರಕ್ಷೆಗೆ, ಆರೋಗ್ಯ ರಕ್ಷಣೆಗೆ

ಶೇಕಡ ಐವತ್ತರ ಗೌರವಧನ ಏರಿಕೆ
ಅಂಗನವಾಡಿ ಕಾರ್ಯಕರ್ತೆಯರಿಗೆ
ಮಧ್ಯಾಹ್ನದ ಬಿಸಿಯೂಟ ಪ್ರೌಢ ಶಿಕ್ಷಣಕೆ
ಒತ್ತು ಕೊಟ್ಟು ಹಿರಿಯರ ಆರೋಗ್ಯ ರಕ್ಷಣೆಗೆ

ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದವರಿಗೆ
ತೆರಿಗೆಗೆ ಆದಾಯ ಮಿತಿ ಏರಿಕೆಯ ಜೊತೆಗೆ
ತೆರಿಗೆ ದರಗಳ ಮಿತಿ ಮಾಡಿರುವರು ಹೆಚ್ಚಿಗೆ
ಈ ಜಾಣ ಕ್ರಮದಿಂದ ಸೆಳೆದರವರನು ತೆಕ್ಕೆಗೆ

ವಿತ್ತ ಸಚಿವರ ದಿಟ್ಟ ನಿರ್ಧಾರಗಳ ದಿಸೆಯಿಂದ
ಹೂಡಿಕೆದಾರರಿಗೆ ಉತ್ತೇಜನ ನೀಡಳಿದೆಯ?
ಸಾಮರ್ಥ್ಯ, ಸಂಪತ್ತು ಸಂಗ್ರಹ, ಬಳಕೆ ಹೆಚ್ಚುವುದೆ?
ಸರ್ವತೋಮುಖ ಆರ್ಥಿಕ ಅಭಿವೃದ್ದಿಯು ಸಾಧ್ಯವೆ?

ಈ ಪ್ರಶ್ನೆಗಳಿಗೆ ಉತ್ತರ ವರ್ಷಗಳ ನಂತರ
ಕಾದು ನೋಡುವ ಕುತೂಹಲವಿರಲಿ ನಿಮ್ಮಹತ್ತಿರ
ಸ್ಪಷ್ಟ ಮಧ್ಯಂತರ ಚುನಾವಣೆಗಿದು ತಂತ್ರ
ಮತ್ತೆ ಕೇಂದ್ರ ಸರ್ಕಾರಕೆ ಬರುವುದು ಅತಂತ್ರ

No comments: