Oct 28, 2009

ಹನಿಗಳು - 7


-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?

-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ

-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ

-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ

-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು

-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ

-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ

-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ

-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...

-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.

10 comments:

Jyoti Hebbar said...

ಮಂತ್ರಿ ಬಳಗವೆನಾದರೂ ನಿಮ್ಮ ಬ್ಲಾಗ್ ನೋಡಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
ತುಂಬಾ ಚೆನ್ನಾಗಿವೆ ಹನಿಗಳು...

ಶಿವಪ್ರಕಾಶ್ said...

tumba channagidave sir..
Reflecting the current situation of our state.

ಚಂದಿನ | Chandrashekar said...

ಜ್ಯೋತಿ ಹಾಗು ಶಿವಪ್ರಕಾಶ್ ಅವರಿಗೆ

ಧನ್ಯವಾದಗಳು...

ಗೌತಮ್ ಹೆಗಡೆ said...

puttage chendage ive nimmella kavanagalu:) small is beautiful:):)

ಮನಸು said...

ತುಂಬಾನೇ ಚೆನ್ನಾಗಿದೆ, ಈಗಿನ ಪರಿಸ್ಥಿತೆಗೆ ಚೆನ್ನಾಗಿ ಹೊಂದುತ್ತದೆ. ಇನ್ನಷ್ಟು ಬರಲಿ ಇದೆ ತರಹದ ಸಾಲುಗಳು.
ವಂದನೆಗಳು

ಚಂದಿನ | Chandrashekar said...

ಧನ್ಯವಾದಗಳು ಗೌತಮ್ ಹೆಗಡೆ ಹಾಗು ಮನಸು ಮೇಡಮ್ ಅವರಿಗೆ.

ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರೆಯಲಿ ಎಂಬ ಹಂಬಲದೊಂದಿದಿಗೆ.

ಜಲನಯನ said...

ಚಂದಿನ ಸಕಾಲಿಕ ಮತ್ತು ವ್ಯವಸ್ಥೆಗೆ ಕನ್ನಡಿಹಿಡಿದಿದ್ದೀರಿ...ಆದ್ರೆ ಕನ್ನಡಿ ನೋಡುವವರು ಕಣ್ಣಿಗೆ ಬಟ್ತೆ ಕಟ್ಟಿಕೊಂಡರೆ ಏನು ಮಾಡಲಾಗುವುದು? ಭಟ್ಟಂಗಿಗಳ ಕಾಮೆಂಟರಿ ಮಾತ್ರ ಕೇಳಿಸುತ್ತೆ ಅವರಿಗೆ...ಚನ್ನಾಗಿದೆ ನಿಮ್ಮ ಸರಣಿ ದೀಪಾವಳಿಯ ಸರ-ಪಟಾಕಿ ಹತ್ತಿಸಿದಂತಿದೆ..

ಚಂದಿನ | Chandrashekar said...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು,
ಜಲನಯನ ಅವರೆ.

ಹರೀಶ ಮಾಂಬಾಡಿ said...

ಸಾಲುಗಳು ಸಖತ್ತಾಗಿದೆ!

ಚಂದಿನ | Chandrashekar said...

ಮತ್ತೊಮ್ಮೆ ವಂದನೆಗಳು...ಹರೀಶ ಮಾಂಬಾಡಿಯವರಿಗೆ!