ಹೊಂಚುತ್ತಿವೆ ರಣ ಹದ್ದುಗಳು
ಉರಿಬಿಸಿಲು ಒಡಲ ಸುಡುತಿರೆ
ದಿಗ್ಗನೆ ಉಮ್ಮಳಿಸಿದೆ ಬೆಂಕಿ ಮುಗಿಲುದ್ದ
ಬಿರುಕಿಟ್ಟ ಧರೆಗೆ ಸಾಂತ್ವನದ ಹಗಲುಗನಸು
ಹೆಣಗಳ ಹಿಂಡು ಹಿಂಡು
ಹಸಿದ ಹದ್ದುಗಳ ಆಕ್ರಂದನ
ಸ್ಮಶಾನ ಮೌನದ ಶೋಕಗೀತೆಗೆ
ನಗ್ನ ನೀಲಾಕಾಶದ ನೀರವಮೌನ ಸಾಥ್
ಹಸಿವು, ಬಡತನ, ಅಸಾಹಯಕತೆ
ಜಗದ ಉದ್ದಗಲಕೂ ಅವರದೇ ಸಂತೆ
ಜಗದೋದ್ಧಾರಕೊನೊಬ್ಬ ಅಬ್ಬರಿಸುತಿರುವ
ಸಾವರಸಿ, ತಡವರಿಸಿದ ಮೂಕವೀಕ್ಷಕರ ಅಳಲು
ನೀಲಿ ನಕಾಶೆ ಎಂದೋ ರೆಡಿ
ಕಾಲ್ತುಲಿತಕೆ ಸಾವಿರಾರು ಜನರ ಆಹುತಿ
ಬೆಪ್ಪನಿಗೆ ಇದ್ಯಾವುದೂ ತೋಚದ ಅಗೋಚರ
ಜಗದೊಡೆಯನ ಆಥಿತ್ಯಕೆ ಸಕಲವು ಸಮರ್ಪಣೆ
ಸೂಕ್ಷ್ಮಾತಿಸೂಕ್ಷ್ಮಗಳ ತಿರುಳಿದು
ಬಟಾಬಯಲಾಗುವುದು ಭಂಡತನ
ಬೇಟೆಯಾಡುವರೊ ಅನಾಯಾಸವಾಗಿ
ಮರುಳ, ತಿಳಿಗೇಡಿ ಎಚ್ಚೆತ್ತು ಜೀವವುಳಿಸಿಕೊ
ಉರಿಬಿಸಿಲು ಒಡಲ ಸುಡುತಿರೆ
ದಿಗ್ಗನೆ ಉಮ್ಮಳಿಸಿದೆ ಬೆಂಕಿ ಮುಗಿಲುದ್ದ
ಬಿರುಕಿಟ್ಟ ಧರೆಗೆ ಸಾಂತ್ವನದ ಹಗಲುಗನಸು
ಹೆಣಗಳ ಹಿಂಡು ಹಿಂಡು
ಹಸಿದ ಹದ್ದುಗಳ ಆಕ್ರಂದನ
ಸ್ಮಶಾನ ಮೌನದ ಶೋಕಗೀತೆಗೆ
ನಗ್ನ ನೀಲಾಕಾಶದ ನೀರವಮೌನ ಸಾಥ್
ಹಸಿವು, ಬಡತನ, ಅಸಾಹಯಕತೆ
ಜಗದ ಉದ್ದಗಲಕೂ ಅವರದೇ ಸಂತೆ
ಜಗದೋದ್ಧಾರಕೊನೊಬ್ಬ ಅಬ್ಬರಿಸುತಿರುವ
ಸಾವರಸಿ, ತಡವರಿಸಿದ ಮೂಕವೀಕ್ಷಕರ ಅಳಲು
ನೀಲಿ ನಕಾಶೆ ಎಂದೋ ರೆಡಿ
ಕಾಲ್ತುಲಿತಕೆ ಸಾವಿರಾರು ಜನರ ಆಹುತಿ
ಬೆಪ್ಪನಿಗೆ ಇದ್ಯಾವುದೂ ತೋಚದ ಅಗೋಚರ
ಜಗದೊಡೆಯನ ಆಥಿತ್ಯಕೆ ಸಕಲವು ಸಮರ್ಪಣೆ
ಸೂಕ್ಷ್ಮಾತಿಸೂಕ್ಷ್ಮಗಳ ತಿರುಳಿದು
ಬಟಾಬಯಲಾಗುವುದು ಭಂಡತನ
ಬೇಟೆಯಾಡುವರೊ ಅನಾಯಾಸವಾಗಿ
ಮರುಳ, ತಿಳಿಗೇಡಿ ಎಚ್ಚೆತ್ತು ಜೀವವುಳಿಸಿಕೊ
4 comments:
nice one!!!
ಧನ್ಯವಾದಗಳು ಮೇಡಮ್,
ಬಿಟ್ಟಿ ಬಿಡಿ ನನ್ನ ಬಂಧನಗಳಿಂದ ಸರಿಸಿ ಹಾರಬೇಕು ನನ್ನಿಚ್ಚೆಯಂತೆ ದೂರ ದೂರ ಬಲುದೂರ.
ಅಸ್ತಂಗತನಾಗಬೇಕಿದೆ ಯಾರ ಪರಿವೆಗೂ ನಿಲುಕದ ದೂರ ದಿಗಂತದಲ್ಲಿ. ಅಲ್ಲಿಯಾರ ಅಂಕೆಶಂಕೆಯೂ ಬೇಡ.
ಪ್ರೀತಿಯ ಚಿತ್ತಾರ ಬೇಡ, ಬೇಕು ಸುಡುಮರಳುಗಾಡಿನಂತ ಭೀಭತ್ಸ ಶೂನ್ಯ.
ನಂಗೊತ್ತು ರಣಹದ್ದುಗಳು ನೀವು. ಕೋಳಿಮರಿಗಳೆಂದರೆ ಬಲುಪ್ರೀತಿ ನಿಮಗೆ..
ಇದ್ಯಾಕಪ್ಪಾ ಗೌಡ ಪದ್ಯ ಬರೀತಾನಲ್ಲಾ ಅನ್ನಬೇಡಿ ಸಾರ್..
ನಿಮ್ಮ ಪದ್ಯ ಓದುತ್ತಿದ್ದ ನನಗೆ 8 ವರ್ಷಗಳ ಹಿಂದೆ ಬರೆದ ಮೊದಲ ಮತ್ತು ಕಡೇ ಪದ್ಯ ನೆನಪಾಯಿತು ಅಮೇಲೆ ಬರೆಯೋ ಯತ್ನ ಮಾಡಿದರೂ ಬರೆಯಕ್ಕೆ ಆಗಲಿಲ್ಲ.
ನಿಮ್ಮ ಪದ್ಯ ಓದಿದ ಮೇಲೆ ಆದ ರೋಮಾಂಚನಕ್ಕೆ ನನ್ನೊಳಗಿನಿಂದ ದೀಡೀರ್ ಅಂತ ಹೊಮ್ಮಿದ ನೆನಪು ಇದು ನಂಗೆ ಮರೆತೇ ಹೋಗಿತ್ತು.
ಭಾವ ತೀರ್ವತೆಯಲ್ಲಿ ಹೊಮ್ಮಿದ ನಿಮ್ಮ ಪದ್ಯ ತುಂಬಾ ಚೆನ್ನಾಗಿದೆ...
ಸಕತ್ತಾಗಿದೆ...ಕ್ಷಣ ದಿಗ್ಭ್ರಾಂತನಾದೆ.
ತುಂಬಾ ಭಾವಪೂರ್ಣವಾಗಿದೆ.
ಇದನ್ನ ಮುಂದುವರೆಸಿ ಗೌಡ್ರೆ.
Post a Comment