Aug 21, 2009

ಹಾಡು ಅದೇ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

ಬತ್ತಿಹೋದ ಬಾವಿಯಲ್ಲಿ
ಹಸಿರು ಬಳ್ಳಿ ಹರಡಿದೆ
ಯಾವುದೊ ಜೀವಜಂತುವಲ್ಲಿ
ಹೊಂಚು ಹಾಕಿ ಕೂತಿದೆ

ಒಣಗಿ ನಿಂತ ಮರದ ಮೇಲೆ
ಯಾವದೊ ಸಸಿ ಚಿಗುರಿದೆ
ಸರ್ಪವೊಂದು ಅಂದಿನಿಂದ
ಯಾರಿಗಾಗೊ ಕಾದಿದೆ

ಬರಗಾಲದಿ ಮರಳುಗಾಡು
ಬೆಂಕಿಯುಗುಳಿ ನರ್ತಿಸಲು
ಯಾವುದೊ ಜೀವವಲ್ಲಿ
ವಿಷಾದ ರಾಗ ನುಡಿಸುತಿದೆ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

5 comments:

ಶ್ರೀನಿವಾಸಗೌಡ said...

ಇದನ್ನ ರಂಗಕ್ಕೆ ಅಳವಡಿಸಿ, ಒಳ್ಳೆ ಸಂಯೋಜನ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ. ನಿಮ್ಮ ಪದ್ಯ ಹತ್ತು ಹಲವು ಅರ್ಥ ಹೊಮ್ಮಿಸುತ್ತಿದೆ.

ಮನಸು said...

oh ella saalugalu oLLeya arthavannu needute tumba chennagi moodi bandide..

bahaLa istavaagide..

ಚಂದಿನ | Chandrashekar said...

ಗೌಡ್ರೆ,
ನಿಮ್ಮ ಸಲಹೆ ಹಾಗು ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸು ಮೇಡಮ್,

ಪದ್ಯ ನಿಮಗಿಷ್ಟವಾಗಿದ್ದಕ್ಕೆ ಸಂತೋಷವಾಗಿದೆ.

PARAANJAPE K.N. said...

ಇದು ಚೆನ್ನಾಗಿದೆ

ಚಂದಿನ | Chandrashekar said...

ಧನ್ಯವಾದಗಳು ಪರಾಂಜಪೆ ಅವರೆ.