Oct 21, 2009

ಹನಿಗಳು - 6


-1-
ಗೆಳತಿ,
ಬಂದೇ ಬರುವೆ
ಎಂದು ಭರವಸೆ ನೀಡಿ.
ಹೀಗೆ ಭಾವಿ ಪತಿಯೊಂದಿಗೆ
ಬರುವುದು ನ್ಯಾಯವೆ?

-2-
ನನ್ನ
ಬಂಗಾರಿ
ಮುಂಗಾರಿನಂಥಾಗಲು
ಕಾರಣವೇನು
ಗುರುವೆ?

-3-
ಗೆಳತಿ
ಅಚ್ಚ ಕನ್ನಡದಾಕಿ
ಫೋರಮ್ ಮಾಲಿಗೆ
ಕಾಲಿಟ್ಟೊಡನೆ ಇವಳಿಗೇಕೊ
ಇಂಗ್ಲೀಷ್ ಶೋಕಿ?

-4-
ಗೆಳತಿ,
ನೀನೇ ನನ್ನ ಸರ್ವಸ್ವ
ಎಂದದ್ದು ನನಗೊ,
ಇಲ್ಲ ನನ್ನ ಸರ್ವಸ್ವಕ್ಕೊ...

-5-
ನಿನ್ನ
ಮಾದಕ ಕಣ್ಣು
ವರ್ಣಿಸಳಸದಳ
ಕ್ಷಮಿಸು ಪರಿಮಳ

-6-
ಮೊದಲ ವಾರ
ಹೊಮ್ಮಿಸುವೆ
ಸುಗಂಧ ಪರಿಮಳ!
ಕೊನೆಯ ವಾರ
ನಿಲ್ಲುವುದೇ ಇಲ್ಲ
ನಿನ್ನ ಜಗಳ

-7-
ನಲ್ಲೆ
ಈಗ ಸಲ್ಲದು
ಬಿಂಕ, ಬಿಗುಮಾನ
ಮತ್ತೆ ಬೇಡಿದರೂ ಸಿಗದು
ಈ ಸುಂದರ ಹವಾಮಾನ

-8-
ಚೆಲುವೆ,
ದೂರದ ಬೆಟ್ಟ ನುಣ್ಣಗೆ
ಎಂದು ಖಚಿತವಾಗಿದ್ದು
ನೀನು ಹತ್ತಿರ ಬಂದಾಗಲೆ...

-9-
ನಲ್ಲ,
ನೀನಿಲ್ಲದೆ
ನಾನಿರಲಾರೆ
ಎಂದು ಹೇಳಿದ್ದು
ಛೆ...ಸಿನಿಮಾ ಹೆಸರೆ?

-10-
ವಸಂತದಲ್ಲಿ
ಕಂಗೊಳಿಸುವ
ಹಸಿರು.
ನಿನ್ನ ಬೆಚ್ಚಗಿನ
ಉಸಿರು...

7 comments:

Jyoti Hebbar said...

ಹನಿಗಳು ಕಪ್ಪೆ ಚಿಪ್ಪಿನೊಳಗೆ ಬಿದ್ದು ಮುತ್ತಾಗಿವೆ ಎಂಬುದೆನ್ನ ಅನಿಸಿಕೆ.
ಮಳೆಯೇ ಬರಲಿ ಎಂಬುದೆನ್ನ ಬಯಕೆ...

ಶಿವಪ್ರಕಾಶ್ said...

Ha Ha Ha... All are super...
Especially i liked 1, 3, 4, 6 and 8

ಚಂದಿನ | Chandrashekar said...

ಜ್ಯೋತಿ ಹಾಗು ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರೆಯಲಿ...

shivu.k said...

ಚುರುಕಾಗಿ ಚುರುಕು ಮುಟ್ಟಿಸುತ್ತವೆ ನಿಮ್ಮ ಚುಟುಕುಗಳು.

ಚಂದಿನ | Chandrashekar said...

ಧನ್ಯವಾದಗಳು ಶಿವು ಅವರಿಗೆ...

ದೀಪಸ್ಮಿತಾ said...

ಹನಿಗವನಗಳು ಮೂರ್ನಾಲ್ಕು ಸಾಲುಗಳಲ್ಲೇ ಎಷ್ಟು ಅರ್ಥ ಕೊಡುತ್ತವೆ.

ಚಂದಿನ | Chandrashekar said...

ದೀಪಸ್ಮಿತ ಅವರೆ,

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.