Oct 8, 2009

ಕರುಣೆಯಿರಲಿ


ಕೊಚ್ಚಿಹೋಗಿದ್ದು;
ಬರಿ ಮನೆಗಳಲ್ಲಾ, ಮನದ ಆಸೆಗಳು
ಹೂತುಹೋಗಿದ್ದು;
ಬರಿ ದವಸಧಾನ್ಯಗಳಲ್ಲ, ಪುಟಿದ ಕನಸುಗಳು
ಕರಗಿಹೋಗಿದ್ದು;
ಬರಿ ಉಪ್ಪುಸಕ್ಕರೆಯಲ್ಲ, ಸವಿ ನೆನಪುಗಳು
ಸಿಡಿದುಬಿದ್ದಿದ್ದು;
ಬರಿ ಮನೆಯ ಮಾಳಿಗೆಯಲ್ಲ, ನಂಬಿಕೆಗಳು
ಉರುಳಿಬಿದ್ದಿದ್ದು;
ಬರಿ ನಾಲ್ಕುಗೋಡೆಗಳಲ್ಲ, ದಶಕಗಳ ನೆರಳು
ಉಕ್ಕಿಹರಿದದ್ದು;
ಬರಿ ಕಣ್ಣೀರಲ್ಲ, ನಗುವುಂಡ ನೆನ್ನೆಗಳು
ಚದುರಿಬಿದ್ದಿದ್ದು;
ಬರಿ ಪಾತ್ರೆಗಳಲ್ಲ, ಸಂತಸದ ನಾಳೆಗಳು
ಅಳಿಸಿಹೋಗಿದ್ದು;
ಬರಿ ರಂಗೋಲೆಗಳಲ್ಲ, ರಂಗಿನ ಹಬ್ಬಗಳು
ತೋಯ್ದುಹೋಗಿದ್ದು;
ಬರಿ ತೊಟ್ಟವಸ್ತ್ರಗಳಲ್ಲ, ಎಲ್ಲ ಶುಭಕಾರ್ಯಗಳು
ಮಾಯವಾಗಿದ್ದು;
ಬರಿ ಅಂಕಿಅಂಶಗಳಲ್ಲ, ಬದುಕಿನ ಭದ್ರತೆಗಳು

1 comment:

ಶಿವಪ್ರಕಾಶ್ said...

ನಿಜ ರೀ. :(
ಕವನ ಚನ್ನಾಗಿದೆ ಅಂತ ಹೇಳಬೇಕೋ.. ? ಅಥವಾ ಸಂಭವಿಸಿದ ಪರಿಸ್ಥಿತಿಯನ್ನು ನೆನೆದು ದುಃಖ ಪಡಬೇಕೋ.. ಗೊತ್ತಾಗ್ತಿಲ್ಲ...