Nov 1, 2009

ಬಿಂಬ : 41 - 45

ಬಿಂಬ - 41
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.

ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.

ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.

ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.

ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.

7 comments:

ಮನಸು said...

ವಾಹ್!!! ಎಂತ ಸಾಲುಗಳು ನಿಜಕ್ಕೊ ಸತ್ಯವಾದದ್ದೆ..
ಎಲ್ಲಾ ಸಾಲುಗಳು ಅರ್ಥಗರ್ಭಿತವಾಗಿವೆ...ತುಂಬಾ ತುಂಬಾ.....ಇಷ್ಟವಾಗಿದೆ ಸರ್,

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್...

ರಾಹುದೆಸೆ !! said...

ಚಂದಿನ ಅವರೇ ..

ಅದ್ಭುತವಾದ ಸಾಲುಗಳು..

--ಎ.ಕಾ.ಗುರುಪ್ರಸಾದಗೌಡ.;www.balipashu.blogspot.com

ಸಾಗರದಾಚೆಯ ಇಂಚರ said...

Entha saalugalu sir, tumbaa artha garbhitavaagive

ಚಂದಿನ | Chandrashekar said...

ರಾಹುದೆಸೆ ಹಾಗು ಡಾ.ಗುರುಮೂರ್ತಿಯವರಿಗೆ ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ...

ಹರೀಶ ಮಾಂಬಾಡಿ said...

ಜನಸಾಮಾನ್ಯರನ್ನಾಳುವ
ಅರಸ!?
ಅವರೂ ಜನಸಾಮಾನ್ಯರಲ್ಲವೇ. ಅವರಿಗೆ ಹಾರ ಸನ್ಮಾನ ಬೇರೆ ಕೇಡು.
ವಾಸ್ತವ ಸ್ಥಿತಿಯ ಸಹಜ ನೋಟ ನಿಮ್ಮ ಸಾಲುಗಳಲ್ಲಿದೆ.

ಚಂದಿನ | Chandrashekar said...

ಹರೀಶ ಮಾಂಬಾಡಿಯವರೆ ಧನ್ಯವಾದಗಳು...