ಓ ನನ್ನ ಗೆಳೆಯನೆ!
ಆ ಅತ್ಯದ್ಭುತ ಕಾವ್ಯವೇ
ನನ್ನ ಏಕೈಕ ಸ್ವರ್ಗ
ಮತ್ತೆ ಆ ಮಾದಕ ಸೌಂದರ್ಯ
ಅದೇ ಈ ಜಗದ ಚಿರಂತನ ಸತ್ಯ...
ಅಲ್ಲಿರುವುದು ನನ್ನ ಶ್ರೇಷ್ಠತೆಯ ಹುಡುಕಾಟದ
ಐಕ್ಯ ಮಂಟಪ.
ಓ ನನ್ನ ಆಪ್ತನೆ!
ಇಲ್ಲಿ ನೋಡು ಮನಮೋಹಕ ಸಂಗೀತ
ನನಗೆ ದೈವವಿತ್ತ ಅತಿದೊಡ್ಡ ಕೊಡುಗೆ
ಮತ್ತೆ ಆ ನಿಶಬ್ಧ ಮೀಟುವ ಅನನ್ಯ ರಾಗಗಳು
ಮೂಕವಿಸ್ಮಿತನನ್ನಾಗಿಸುತ್ತವೆ
ಅದರಲ್ಲಡಗಿದೆ ನನ್ನ ನೆಚ್ಚಿನ ನೆಲೆ
ಆ ಭಾವಲಹರಿಯ ನರ್ತನದಲ್ಲಿ...
ಓ ನನ್ನ ಸ್ನೇಹಿತನೆ!
ಇನ್ನೂ ಇದೆ, ಅದೇ ಆ ನಿಸರ್ಗದ ಹಸಿರಿನ ಸಿರಿ
ನನ್ನ ಮತ್ತೊಂದು ಸುಂದರ ಸಂಗಾತಿ
ಮತ್ತಲ್ಲಿ ಕೇಳುವ ದುಂಬಿಗಳ ನಿನಾದ,
ಹಕ್ಕಿಗಳಿಂಚರ ವಾಹ್...ಏನದ್ಭುತ!
ಆ ಪ್ರಕ್ರಿಯೆಯಲ್ಲಿದೆ ನನ್ನ ಉತ್ಸಾಹದ ಚಿಲುಮೆ
ಆತ್ಮರತಿ ಸಿದ್ಧಿಸುವ ಕ್ಷಣದ ಸನಿಹದಲ್ಲಿ...
3 comments:
ಶ್ರೇಷ್ಠತೆಯ ಹುಡುಕಾಟದಲ್ಲಿ...
ಶ್ರೇಷ್ಠವಾದ ಕವನ ಮೂಡಿದೆ..
ಅಭಿನ೦ದನೆಗಳು...
ಅಹ
ಸುಂದರ ಕವಿತೆ
ಚುಕ್ಕಿ ಚಿತ್ತಾರ ಹಾಗು ಡಾ.ಗುರುಪ್ರಸಾದ್ ಅವರ ಮೆಚ್ಚುಗೆಗೆ...
ಖುಷಿಯಾಗಿದೆ...ಧನ್ಯವಾದಗಳು
Post a Comment