Mar 8, 2010

ಹತಾಶೆಯ ಕಣ್ಣು...

ರೆಕ್ಕೆ ಮುರಿದ ಹಕ್ಕಿಗೆ
ಹಾರುವ ಹಂಬಲ
ನಿಲ್ಲದ ಯತ್ನ
ಅತೀವ ಹತಾಶೆ

ಬದಿಯಲ್ಲೊಂದು
ಕುಂಟ ಬೆಕ್ಕಿನ
ಸೋತ ಕಣ್ಣುಗಳಿಂದ
ಸಾಂತ್ವನ

ಕಾಫಿ ಕಪ್ಪಿನ
ಸುಳಿಗೆ ಸಿಲುಕಿ
ತಳ ತಾಕಿದ
ದುರ್ದೈವದ ಇರುವೆ

ಪಾಪದ ಸೊಳ್ಳೆ
ಬ್ಯಾಟರಿ ಬ್ಯಾಟಿಗೆ
ಸಿಕ್ಕಿ ಚಿನಕುರಳಿ ಸದ್ದು
ಅದರ ಸತ್ತ ಸಂದೇಶ

ಮನೆಯೊಡತಿಗೆ
ಗ್ಯಾಸು
ಮುಗಿದೇ ಹೋಯಿತೆನ್ನುವ
ಎಂದಿನ ಆತಂಕ

ಇವರಿಗೆ ಮಾವಿನೆಲೆಯ
ರೆಂಬೆ ಕಡಿದು
ಮನೆಗೆ ತೋರಣ
ಕಟ್ಟುವ ಧಾವಂತ

9 comments:

ಮನಸು said...

super chennagide...

ಸಾಗರದಾಚೆಯ ಇಂಚರ said...

ತುಂಬಾ ತುಂಬಾ ಸೊಗಸಾಗಿದೆ
ಅಕ್ಷರಗಳ ಒಳಗಿನ ಅರ್ಥ ಬಹಳ ದೊಡ್ಡದು

ಚಂದಿನ | Chandrashekar said...

ಮನಸು ಮೇಡಮ್ ಹಾಗು ಡಾ.ಗುರುಪ್ರಸಾದ್ ಅವರೆ,

ನಿಮ್ಮ ಮೆಚ್ಚುಗೆಯ ನುಡಿಗಳಿಗೆ...ನನ್ನ ಹೃದಯಪೂರ್ವಕ ಕೃತಜ್ಞತೆಗಳು...

V.R.BHAT said...

ಚೆನ್ನಾಗಿದೆ, ಅವರವರ ಚಿಂತೆ ಅವರವರಿಗೆ, ಆದ್ರೆ ಒಂದು ಮಾತು, ಇಲ್ಲಿ ಬೆಕ್ಕು ಸ್ವಲ್ಪ ಸರಿ ಇದ್ದರೆ ಹಕ್ಕಿಯ ಗತಿ ಗೋವಿಂದ ! ಚೆನ್ನಾಗಿದೆ ನಿಮ್ಮ ಕಲ್ಪನೆ; ಚೀನೀ ಬ್ಯಾಟಿನ ಅನುರಣನೆ !

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನಿಮ್ಮ ಕಲ್ಪನೆ ಚೆನ್ನಾಗಿದೆ.

ಚಂದಿನ | Chandrashekar said...

ಧನ್ಯವಾದಗಳು ವಿ.ಆರ್ ಭಟ್ ಹಾಗು ಕೂಸು ಮುಳಿಯಾಳ ಅವರೆ, ನಿಮ್ಮ ಮೆಚ್ಚುಗೆಗೆ...

ಮನಮುಕ್ತಾ said...

ಚೆನ್ನಾಗಿದೆ.

ಚಂದಿನ | Chandrashekar said...

ಧನ್ಯವಾದಗಳು ಮನಮುಕ್ತಾ ಅವರೆ....

ಚಂದಿನ | Chandrashekar said...

ಆತ್ಮೀಯ ವಿ ಆರ್ ಭಟ್ ಅವರೆ,

ನಿಮಗೂ ಸಹ ಯುಗಾದಿಯ, ಹೊಸವರ್ಷದ ಹಾರ್ಧಿಕ ಶುಭಾಶಯಗಳು...