Feb 5, 2011

ಕಾವ್ಯ

ಸುಂದರ ಸಾಲಿನ ಶೇಖರಣೆ;
ಕದ್ದ ಮಾಲಿಗೆ ಒಗ್ಗರಣೆ.
ಪ್ರಭಾವಕ್ಕೆ ಉಕ್ಕಿದ,
ಪ್ರೇರಣೆಯಿಂದ ಹಿಗ್ಗಿದ,
ಭಾರಕ್ಕೆ ಬಾಗಿದ
ಬಾಳೆಗೊನೆ.

ಇಲ್ಲಾ,
ಭಾವದ ಬೆಸುಗೆ,
ಅರೆ ಬೆಂದ ಅನ್ನ,
ಋತು, ಮದ್ಯ, ಮಹಿಳೆ
ಕಾಡು, ಕಡಲು, ಕಿನಾರೆ
ಎಲ್ಲವೂ ಕ್ಲೀಷೆ.

ಅಥವಾ,
ಆತ್ಮವಿಲ್ಲದ
ರಾಮ, ಯೇಸು, ಅಲ್ಲ
ಅಲ್ಲವೇ ಅಲ್ಲ.

ಅದೊಂದು,
ಕಾಲ, ದೇಶವ ದಾಟಿ
ಕದಡಿ, ಕಾಡುವ
ಅಸಹಜ ಸಾವು, ಅಥವಾ...

4 comments:

ಸಾಗರದಾಚೆಯ ಇಂಚರ said...

Lovely sir

tada aagiddakke sorry

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಅವರೆ,
ನಿಮ್ಮ ಸತತ ಮೆಚ್ಚುಗೆಗೆ.

ಮನಸು said...

ತುಂಬಾ ದಿನಗಳೆ ಆಗಿತ್ತು ನಿಮ್ಮ ಬ್ಲಾಗ್ ಕಡೆ ಬಂದು ಕವನ ತುಂಬಾ ಇಷ್ಟವಾಯಿತು..... ನನ್ನ ಬ್ಲಾಗಿನಲ್ಲಿ ನೀವು ಪೋಸ್ಟ್ ಮಾಡಿರುವುದು ತೋರಿಸುತ್ತಿಲ್ಲ...

ಏಕೋ ನೀವು ಬರೆಯುವುದು ನಿಲ್ಲಿಸಿದ್ದೀರೆಂದು ಇಂದು ನಿಮ್ಮ ಬ್ಲಾಗ್ನಲ್ಲಿ "ಕವನದ ಕೂಗು " ಕೇಳುತಲೇ ಇಲ್ಲ ಎಂದು ಕಾಮೆಂಟ್ ಹಾಕಲು ಬಂದೆ ತಕ್ಷಣವೇ ತಿಳಿದಿದ್ದು ನೀವು ಪೋಸ್ಟ್ ಮಾಡುತ್ತಲಿದ್ದಿರೆಂದು...

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್,

ನಿಮ್ಮ ಮೆಚ್ಚುಗೆಯ ನುಡಿಗಳಿಗೆ...