ಕಾಲ
ಕಟ್ಟಿ, ಕೂಡಿಡಲು
ಕಪ್ಪು ಹಣವಲ್ಲ
ದೇಶ
ದೋಚಿಕೊಳ್ಳಲು
ಯಾರಪ್ಪನ ಸ್ವತ್ತಲ್ಲ
ಕಿಂಚಿತ್
ಇತಿಹಾಸ ಬಲ್ಲ
ಬಲ್ಲಿದನೂ ಊಹಿಸಬಲ್ಲ
ನಾಳೆಗಳ ನಾದ-ವಿನೋದ
ಸಾಗಲಿ, ಸಾಗಲಿ
ಸಡಗರದ ಗರಡಿ
ಸಾಗರವ ದಾಟಿ, ಶಿಖರಗಳ ಮೆಟ್ಟಿ
ಕೊರೆದು, ಜಿಗಿದು, ತೇಲಿ, ಹಾರಿ
ಎಗ್ಗಿಲ್ಲದೆ ಮಬ್ಬುಗತ್ತಲಿನಲ್ಲೂ
ಅಲ್ಲಲ್ಲಿ ಇರುವೆಗಳ ಹಿಂಡು, ಹೆಗ್ಗಣಗಳ ದಂಡು
ಖಂಡಿತ
ಮತ್ತೆ ಬರುವುದು ವಸಂತ
ಮೂಡಣದ ರವಿಯೂ
ಮುಗುಚಿ, ಮುಗ್ಗರಿಸುವಂತೆ...
5 comments:
ತುಂಬಾ ಚೆನ್ನಾಗಿದೆ ಕವನ... ಮತ್ತೆ ಬರುವುದು ವಸಂತ ಆದರೆ ಕಾಯುವ ತಾಳ್ಮೆ ಇರಬೇಕು ಅಷ್ಟೆ
Chandina,
sundara kavana
taalmeyalli baalveye ide
ಮನಸು ಮೇಡಮ್ ಹಾಗು ಡಾ.ಗುರುಪ್ರಸಾದ್ ಅವರೆ,
ನಿಮ್ಮ ಸತತ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಧನ್ಯವಾದಗಳು...
ಮನಸು ಮೇಡಮ್, ಡಾ.ಗುರುಪ್ರಸಾದ್ ಹಾಗು ರಘು ಅವರೆ,
ನಿಮ್ಮ ಮೆಚ್ಚುಗೆಗೆ.
Nice,
ತುಂಬಾ ಚೆನ್ನಾಗಿದೆ, ವಸಂತ ಬರುವ ವೇಳೆ ಇದು.
ದಯವಿಟ್ಟು ನನ್ನ ಬ್ಲಾಗ್ http://kannadahanigalu.com/ ನ ಒಮ್ಮೆ ಭೇಟಿಕೊಡಿ. ನಿಮ್ಮ ಕವನಗಳನ್ನು ಸಾದ್ಯವಾದಲ್ಲಿ ನಮ್ಮ ತಾಣದಲ್ಲಿ ಸೇರಿಸಿ (ನಿಮ್ಮದೆ ಹೆಸರಿನಲ್ಲಿ), ಇನ್ನೂ ಹೆಚ್ಚಿನ ಜನರನ್ನು ನಿಮ್ಮ ಕವನಗಳ ಮೂಲಕ ತಲುಪಿ.
Regards
ಕನ್ನಡಹನಿಗಳ ಬಳಗ
Post a Comment