Sep 10, 2009

ಕಾಡು...


ಕಾಡು...
ಅದರೂ ಇಲ್ಲಿ,
ಕಂಗೊಳಿಸುವ ಹಸಿರಿಲ್ಲ,
ವಗರಾದ ಚಿಗುರಿಲ್ಲ
ಮಾದಕ ಹೂವುಗಳಿಲ್ಲ,
ರುಚಿಯಾದ ಹಣ್ಣಿಲ್ಲ

ಕಾಡು...
ಆದರೂ ಇಲ್ಲಿ
ನಿರ್ಮಲ ನೀರಿಲ್ಲ,
ತಂಪಾದ ನೆರಳಿಲ್ಲ
ತಂಗಾಳಿ ಬೀಸುವುದಿಲ್ಲ
ಜಲಧಾರೆಗಳ ಸದ್ದಿಲ್ಲ

ಕಾಡು...
ಆದರೂ ಇಲ್ಲಿ
ಹಕ್ಕಿಗಳಿಂಚರವಿಲ್ಲ
ವನ್ಯಮೃಗಗಳು ಕಾಣುವುದಿಲ್ಲ
ಹುಳ-ಹುಪ್ಪಟೆಗಳು ಹಾಡುವುದಿಲ್ಲ
ರಂಗಿನ ಚಿಟ್ಟೆಗಳ ಸಡಗರವಿಲ್ಲ

ಕಾಡು...
ಆದರೂ ಇಲ್ಲಿ
ಮುಂಜಾವಿನ ಮಂಜಿಲ್ಲ
ಮುಸ್ಸಂಜೆ ಬೆಳಕಿನ ಸವಿಯಿಲ್ಲ
ಮೋಡಗಳ ಮೆರವಣಿಗೆಯಿಲ್ಲ
ಮಳೆಯ ಸುಳಿವಿಲ್ಲ

ಕಾಡು...
ಆದರೂ ಇಲ್ಲಿ
ಬೆಟ್ಟಗುಡ್ಡಗಳಿಲ್ಲ
ಆಳದ ಕಣಿವೆಗಳಿಲ್ಲ
ಹೆಮ್ಮರಗಳ ಗುರುತಿಲ್ಲ
ನಲಿದಾಡುವ ನವಿಲುಗಳಿಲ್ಲ



5 comments:

ಮನಸು said...

ಸರ್,
ಇತ್ತೀಚಿನ ಕಾಡುಗಳು ಹೀಗೆ ಏನು ಇಲ್ಲದೇ ಕಾಡು ಎಂದು ಹೆಸರು ಹ ಹ ಹ.. ಕವನ ಇಷ್ಟವಾಯಿತು...

ಚಂದಿನ said...

ಧನ್ಯವಾದಗಳು ಮೇಡಮ್..

Dileep Hegde said...

ಏನೇನು ಇದ್ದರೆ ಕಾಡು ಅಂತ ಕರೆಯಬಹುದೋ ಅದ್ಯಾವುದೂ ಇಲ್ಲಿಲ್ಲ.. ಅಂದರೆ ಇದೇನು ಕಾಂಕ್ರೀಟ್ ಕಾಡಾ..?? ನಾವು ಕಳೆದುಕೊಳ್ಳುತ್ತಿರುವ ಅತ್ಯಮೂಲ್ಯ ವನ್ಯಸಂಪತ್ತಿನ ಬಗೆಗಿನ ಕಾಳಜಿ ಹೊತ್ತ ಕವನ ಸಕತ್ ಇಷ್ಟವಾಯ್ತು...

Anonymous said...

yes... informative post.

Anonymous said...

мне кажется: восхитительно!! а82ч