ದಿವ್ಯಮಿಲನಕೆ ಸಕಲ ಸಿದ್ಧತೆಯಿಂದ
ಕಾತುರದಿ ಕಾಯುತ್ತಿರುವಾಗ
ತಡವಾಗುತ್ತೆಂದು ಪೋನಾಯಿಸಿ
ರಸಭಂಗ ಮಾಡಿದ ಚಂದಿರ
ತಡವಾದರೂ ಸರಿಯೆ
ಬಿಡದೆ ಕಾಡುವ ಮಡದಿಗೆ
ತಲೆನೋವಿನ ನೆಪವೂಡ್ಡಿ
ಪ್ರಸಿದ್ಧ ನಟನಾದ ಚಂದಿರ
ಸವಿಸವಿ ಮಾತಿಂದ
ಸೆಳೆಯಲೆತ್ನಿಸಿದಾಗ
ಮನೆ ಸ್ವಚ್ಛವಾಗಿಲ್ಲವೆಂದು
ಅಬ್ಬರಿಸುವನಲ್ಲಾ ಚಂದಿರ
ಸಂತೃಪ್ತಿಯ ಬಯಸುತ್ತ
ಇಷ್ಟದ ಅಡುಗೆ ಬಡಿಸಿದರೆ
ಆನಂದದಿಂದ ಆಸ್ವಾಧಿಸಿ
ಮಗುವಂತೆ ಮಲಗಿದ ಚಂದಿರ
ಸುಂದರವಾಗಿ ಅಲಂಕಾರಗೊಂಡು
ಆಕರ್ಷಿಸಲೆತ್ನಿಸಿದರೆ ಅಪಶಕುನವೆಂದು
ನಯವಾಗಿ ಜರಿದು ಜಾರಿಕೊಂಡ
ಚತುರ ಚೆಲುವಾಂಗ ಚಂದಿರ
ಇಳಿಸಂಜೆ ತಂಗಾಳಿಯಲ್ಲಿ
ಹಾಯಾಗಿ ಸುತ್ತೋಣವೆಂದರೆ
ಏಕೊ ಸುಸ್ತಾಗುತ್ತಿದೆ ಎಂದು
ಸುಮ್ಮನಾದನಲ್ಲಾ ಚಂದಿರ
ಬರುವ ಶನಿವಾರ ಸಿನಿಮಾ
ನೋಡಿ ಬರೋಣ ಎಂದರೆ
ಸಿಡಿಮಿಡಿಗೊಂಡು ಸಿಟ್ಟಾಗಿ
ಚೀರಿಕೊಂಡನೇಕೆ ಚಂದಿರ
ಭಾನುವಾರವಾದರೂ ವಿಶ್ರಾಂತಿ
ಪಡೆಯಿರೆಂದು ವಿನಂತಿಸಿಕೊಂಡರೆ
ಗೆಳೆಯರಿಗೆ ಕರೆಮಾಡಿ ಕೂಡಲೆ
ಕಾಲ್ತೆಗೆಯುತ್ತಾನಲ್ಲಾ ಚಂದಿರ
ನಕಾರಾತ್ಮಕ ಪ್ರತಿಕ್ರಿಯಿಂದ
ಬೇಸತ್ತು ತವರುಮನೆಗೋದರೆ
ತಬ್ಬಲಿಯಂತೆ ಗೋಗರೆದು
ಕೂಡಲೆ ಬರಹೇಳಿದ ಚಂದಿರ
ಕ್ಷಣದಲೆ ಅಪ್ಪಿಕೊಂಡು ಆತುರುದಿ
ಮಿಲನಕೆ ಹಾತೊರೆದು ನಿಂತಾಗ
ತಿಂಗಳಾಯಿತೆಂದರೆ ತಬ್ಬಿಬ್ಬಾಗಿ
ತಣ್ಣಗಾದ ಬಡಪಾಯಿ ಚಂದಿರ
Oct 12, 2009
ಮತ್ತೆ ಬರುವನು ಚಂದಿರ - 36
Subscribe to:
Post Comments (Atom)
1 comment:
ಚ೦ದಿರನಿಗೆ ಮೊದಲಿಗೊ೦ದು ನಮನ.... ಆದರೆ ಮಡದಿ ಬಯಸಿದಾಗ ಸಿಗದ ಚ೦ದಿರನಿಗೆ ಹೀಗಾಗಬೆಕಾದ್ದೇ.. ತಕ್ಕ ಶಾಸ್ತಿಯಾಯಿತು. ಪಶ್ಚಾತ್ತಪವಿಲ್ಲ.. ಬಡಪಾಯಿಯೇನಲ್ಲ..
Post a Comment