Jan 14, 2010

ಇಂದು ವಿವೇಚನೆ ಮಸುಕಾಗಿದೆ...

ಕಾಮ,
ಐಷಾರಾಮಿತನ,
ಜನಪ್ರಿಯತೆಯ ಬೆನ್ನತ್ತಿ
ತಮ್ಮ ಸಭ್ಯತೆಯನ್ನು ತೊರೆದಿದ್ದೇವೆ.

ಅಧಿಕಾರ,
ಅಭಿವೃದ್ಧಿ,
ಐಶ್ವರ್ಯದ ಹುಚ್ಚಿಂದ
ತಮ್ಮ ಅತಃಕರಣವನ್ನು ಕಡಿದಿದ್ದೇವೆ.

ಗಡಿ,
ಧರ್ಮ,
ಭಾಷೆಯ ಹೆಸರಲ್ಲಿ
ತಮ್ಮ ವ್ಯಕ್ತಿತ್ವಗಳನ್ನು ಹೂತಿದ್ದೇವೆ.

ಜಾತಿ,
ಬಣ್ಣ,
ಧಾರ್ಮಿಕ ನಂಬಿಕೆಗಳ ಹೆಸರಲ್ಲಿ
ನಾವು ಮನುಷ್ಯತ್ವವನ್ನೇ ಕೊಂದಿದ್ದೇವೆ.

5 comments:

ಸಾಗರದಾಚೆಯ ಇಂಚರ said...

ಸತ್ಯ ಸರ್
ಹಣ ಹಾಗೂ ಅತೀಯಾದ ನಮ್ಮ ಮೇಲಿನ ವಿಶ್ವಾಸ
ನಮ್ಮನ್ನೇ ಕೊಲ್ಲುತ್ತಿದೆ
ಒಳ್ಳೆಯ ಕವನ

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಅವರೆ...

ದೀಪಸ್ಮಿತಾ said...

ಕವನದ ಭಾಷೆ ಸರಳವಾಗಿದ್ದರೂ ಹೇಳುವ ಸತ್ಯ ತುಂಬಾ ದೊಡ್ಡದು

ಚಂದಿನ | Chandrashekar said...

ಧನ್ಯವಾದಗಳು ದೀಪಸ್ಮಿತ ಅವರೆ,

ನಿಮ್ಮ ಮೆಚ್ಚುಗೆಗೆ...

Gohang York said...

Great post and success for you..
Kontraktor Pameran
Jasa Dekorasi Booth Pameran
Kontraktor Booth Pameran
Jasa Pembuatan Booth