ಇಂದು, ಈ ಜಗತ್ತು ಅಧಿಕಾರಿಶಾಹಿ ಶ್ರೀಮಂತರ ಪಾಲಾಗಿದೆ
ಯೋಚಿಸಬೇಡಿ ಪ್ರಿಯ ಬಂಧುಗಳೆ,
ಬನ್ನಿ ನಾವೆಲ್ಲ ಒಂದಾಗಿ ಹಾರೈಸೋಣ
ಅವರಿಗೆ “ಶುಭವಾಗಲಿ” ಎಂದು!
ನಿಮಗೆ ಇನ್ನೊಂದು ಬಹಳ ಕುತೂಹಲಕಾರಿ ಮತ್ತು ಅಚ್ಚರಿಯ ಸಂಗತಿ ಏನೆಂದು ಗೊತ್ತೆ?
ಮತ್ತೊಂದು ದಿಸೆಯಲ್ಲಿ;
ನಮ್ಮ ಅಂದರೆ ಅಸಹಾಯಕ ನಿರ್ಗತಿಕರ ಸಂಖ್ಯೆ
ನಿರಂತರವಾಗಿ ಹೆಚ್ಚಾಗುತ್ತಿರುವುದು ತುಂಬಾ ಒಳ್ಳೆಯದಲ್ಲವೆ?
ಏಕೆಂದರೆ, ಇಂತಹ ಸನ್ನಿವೇಶದಲ್ಲಿ
ನಾವು ದ್ರುತಿಗೆಡದೆ, ಸಹನೆ, ಸಂಯಮದಿಂದ ಮಾನವತ್ವ ಮೆರೆಯೋಣ
ನಾಳೆ ಎಂಬುದು ನಿಸ್ಸಂಶಯವಾಗಿ ನಮ್ಮದಾಗಲಿದೆ!
4 comments:
ಚಂದಿನ
ನಿಮ್ಮ ಸಾಲುಗಳು ಬಹಳ ಇಷ್ಟವಾದವು
ನಾಳೆ ಇದೆ ಎನ್ನುವ ಯೋಚನೆಯೇ ಬದುಕಿಗೆ ಮಾರ್ಗದರ್ಶಿ
ಧನ್ಯವಾದಗಳು ಡಾ.ಗುರುಪ್ರಸಾದ್ ಅವರೆ...
ಅದನ್ನೆಲ್ಲ ತಿಳಿದೇ ನಮ್ಮ ಹಿರಿಯ ಕವಿ ಡೀವೀಜಿ ಹೇಳಿದರು
ದಿನ ದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ ...
ನೆನಪಿದೆ ತಾನೇ ? ಅದೇ ತತ್ವ ಸದಾ ಅನ್ವಯಿಸುತ್ತದೆ: ಲಕ್ಷ್ಮಿ ಸ್ಥಿರವಲ್ಲ !
ಧನ್ಯವಾದಗಳು ಭಟ್ ಅವರೆ, ಡೀವೀಜಿ ಅವರ ಅದ್ಭುತ ಸಾಲನ್ನು ನೆನಪಿಸಿದ್ದಕ್ಕೆ...
Post a Comment