ಬೆಂಕಿ ಎಲ್ಲೆಡೆ ಹರಡುವಾಗ,
ನಂಬಿಕೆ ಕೈ ಕೊಡುವಾಗ,
ವಿನಮ್ರವಾಗಿ ಸುಮ್ಮನಿರಿ
ಭೂತ ನಿಯಂತ್ರಿಸುತ್ತಿದೆ
ಬೆಳಕು ಮಾಯವಾದಾಗ
ಪ್ರೀತಿ ಬೇಸರ ಮೂಡಿಸಿದಾಗ
ಸಂಯಮದಿಂದ ಎಚ್ಚರವಾಗಿರಿ
ಭೂತ ನಿಯಂತ್ರಿಸುತ್ತಿದೆ
ಒಮ್ಮೆಗೆ ಕೆಡುಕು ದಾಳಿಯಿಟ್ಟಾಗ
ಸತ್ಯಕ್ಕೆ ತೀವ್ರ ನೋವುಂಟಾದಾಗ
ಸಹನೆಯಿಂದ ಚುರುಕಾಗಿರಿ
ಭೂತ ನಿಯಂತ್ರಿಸುತ್ತಿದೆ
ಬಾಗಿಲು ವಿಶಾಲವಾಗಿ ತೆರೆದಿರಲಿ
ಗಾಳಿ ನಿಂರಂತರ ಸ್ವಚ್ಛಂದ ಹಾರಾಡಲಿ
ಶಾಂತ ಚಿತ್ತದಿಂದ ಹುಶಾರಾಗಿರಿ
ಭೂತ ನಿಯಂತ್ರಿಸುತ್ತಿದೆ
3 comments:
Kannada Blogs at One Place
ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನೂಡುತಿದ್ದೇನೆ,
ಭೂತದ ಪದ್ಯ ಸಕತ್ ಆಗಿದೆ, ಓದುತ್ತಾ ಹೋದಂತೆ ನಿಮ್ಮ ಪದ್ಯ
ರಂಗದ ಮೇಲೆ ಹಾಡಿದಂತೆ ಕೇಳುತ್ತೆ,
ಯಾವುದಾದರು ನಾಟಕಕ್ಕೆ ಓಪನಿಂಗ್ ಆಗಿ ಬಳಸಿಕೊಂಡರೆ
ಚೆನ್ನಾಗಿರುತ್ತೆ ಅನಿಸುತ್ತೆ.
ನಿಮ್ಮವ ಎಂ ಬಿ ಶ್ರೀನಿವಾಸಗೌಡ
ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದ ಎಂ ಬಿ ಶ್ರೀ.
- ಚಂದಿನ
Post a Comment