ಅದು ಬಹಳ ದಿನಗಳ ಹಿಂದೆ.
ನಾನೀಗ ಬಹುತೇಕ ನನ್ನ ಕನಸ್ಸನ್ನು ಮರೆತಿದ್ದೇನೆ.
ಆದರೆ ಅದು ಆ ಸಮಯದಲ್ಲಿತ್ತು,
ನನ್ನ ಮುಂದೆ,
ಪ್ರಕಾಶಮಾನ ಸೂರ್ಯನಂತೆ---
ನನ್ನ ಕನಸು.
ನಂತರ ಗೋಡೆ ಬೆಳೆಯತೊಡಗಿತು,
ಮಂದಗತಿಯಲ್ಲಿ,
ನಿಧಾನವಾಗಿ,
ನನ್ನ ಮತ್ತು ನನ್ನ ಕನಸಿನ ನಡುವೆ.
ಅದು ಎಲ್ಲಿಯವರೆಗೂ ಬೆಳೆಯಿತೆಂದರೆ ಆಕಾಶ ಮುಟ್ಟುವವರೆಗೆ---
ಗೋಡೆ.
ನೆರಳು.
ನಾನು ಕಪ್ಪು ಬಣ್ಣದವನು.
ಆ ನೆರಳಲ್ಲಿ ನಾನು ಮಲಗುತ್ತೇನೆ.
ನನ್ನ ಕನಸಿನ ಬೆಳಕೆಂದಿಗೂ ಸುಳಿಯಲಿಲ್ಲ
ನನ್ನ ಮುಂದೆ,
ನನ್ನ ಮೇಲೆ.
ಕೇವಲ ಬಲಿಷ್ಟ ಗೋಡೆ.
ಕೇವಲ ನೆರಳು.
ನನ್ನ ಕೈಗಳು!
ನನ್ನ ಕಗ್ಗತ್ತಲ ಕೈಗಳು!
ನನ್ನ ಕನಸನ್ನು ಹುಡುಕಿ!
ನನಗೆ ನೆರವಾಗಿ ಈ ಕತ್ತಲನ್ನು ನಿರ್ನಾಮಗೊಳಿಸಲು,
ಈ ರಾತ್ರಿಯನ್ನು ನುಚ್ಚುನೂರಾಗಿಸಲು,
ಈ ನೆರಳನ್ನು ಹರಿದು ಹಾಕಲು
ಸಾವಿರ ದೀಪಗಳ ಸೂರ್ಯನೊಳಗೆ
ಬಿರುಸಾಗಿ ಸುತ್ತುವ ಸೂರ್ಯನ ಸಾವಿರ ಕನಸುಗಳೊಳಗೆ!
ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ
4 comments:
ಚಂದಿನ....
ನಿರಾಸೆ ಯಾವಾಗಲೂ ಬಲು ಕಷ್ಟ,,,
ಆದರೂ ಆಸೆಯ ಆಸರೆಯಲ್ಲಿದೆ ಈ ಬದುಕು...!
ಈ ಕವನವನ್ನು ಬಹಳ ಸಹಜವಾಗಿ ಅನುವಾದಿಸಿದ್ದೀರಿ...
ಅಭಿನಂದನೆಗಳು...
ಧನ್ಯವಾದಗಳು ಪ್ರಕಾಶ್ ಹೆಗಡೆ ಅವರೆ,
ಪ್ರೋತ್ಸಾಹದ ಪ್ರತಿಕ್ರಿಯೆಗೆ.
ನಲ್ಮೆಯ
ಚಂದಿನ
bahala sahajate inda koodide kavana
ಧನ್ಯವಾದಗಳು ಮೇಡಮ್.
ಮರಳನಾಡಿನಲ್ಲಿರುವಿರೋ, ಇಲ್ಲಾ ಬೆಂಗಳೂರಿನಲ್ಲೋ.
ಪ್ರತಿಕ್ರಿಯೆಗೆ ಖುಷಿಯಾಯಿತು
Post a Comment