ಆತ್ಮೀಯರೇ,
ಹೈದರಾಬಾದಿನಲ್ಲಿರುವ ಕಾರಣ ನಿಮ್ಮನ್ನು ಇದುವರೆಗೂ ಪ್ರತ್ಯಕ್ಷವಾಗಿ ಭೇಟಿಯಾಗುವ
ಅವಕಾಶ ಕೂಡಿ ಬರಲಿಲ್ಲ.
ಆದರೆ, ಇದೇ ಸೋಮವಾರ ಮೇ 04, 2009 ರ ಸಂಜೆ 5.30 ರಿಂದ 7.30 ರವರೆಗೆ ಯವನಿಕಾ, II ಮಹಡಿ, ಕಾನ್ಪರೆನ್ಸ್ ಹಾಲ್,
ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮನ್ನು ಭೇಟಿಯಾಗಲು ಇದೊಂದು
ಉತ್ತಮ ಅವಕಾಶವೆಂದು ಭಾವಿಸುತ್ತೇನೆ.
ಯಾವುದೇ ಕೆಲಸವಿದ್ದರೂ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಿಮ್ಮನ್ನು ಭೇಟಿಯಾಗುವ
ಅವಕಾಶವನ್ನು ತಪ್ಪದೇ ಕಲ್ಪಿಸಿಕೊಡುವಿರೆಂಬ ಒತ್ತಾಸೆಯೊಂದಿಗೆ ನಿಮಗಾಗಿ ಕಾತುರ ಹಾಗು ಕೂತೂಹಲದಿಂದ ಕಾದಿರುತ್ತೇನೆ.
ಅದೇ ಸಮಯದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಯನ್ನು
ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಬಿಡುಗಡೆ ಮಾಡಲಿದ್ದಾರೆ
ಹಾಗು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್, ಹೆಸರಾಂತ ವಿಮರ್ಶಕರು ಹಾಗು ಲೇಖಕರು ಬರಲಿದ್ದಾರೆ.
ಅಧ್ಯಕ್ಷತೆಯನ್ನು ಡಾ.ನಲ್ಲೂರು ಪ್ರಸಾದ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರು ವಹಿಸಿಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನೀವು ಜೊತೆಯಾದರೆ ನನಗೆ ಬಹಳ ಸಂತೋಷವಾಗುತ್ತದೆ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಧನ್ಯವಾದಗಳೊಂದಿಗೆ,
- ಚಂದಿನ
( ಚಂದ್ರಶೇಖರ್, ಈಟೀವಿ ಕನ್ನಡ, ಹೈದರಾಬಾದ್ )
09391041932
email:chandinais@gmail.com
4 comments:
ಚಂದಿನವರೆ,
ದೂರದ ಲಿಬಿಯಾದಿಂದ ಬರಲಾಗುವದಿಲ್ಲವಾದ್ದರಿಂದ ಇಲ್ಲಿಂದನೇ ನನ್ನ ಶುಭಹಾರೈಕೆಗಳನ್ನು ಕಳಿಸುತ್ತಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತೇನೆ. ನಿಮ್ಮನ್ನು ಭೇಟಿಯಾಗುವ ಅವಕಾಶವೊಂದನ್ನು ಕಳೆದುಕೊಳ್ಳುತ್ತಿದ್ದೇನೆಲ್ಲ ಎಂಬ ಕೊರಗು ಕೂಡ ಇದೆ. ಇರಲಿ, ಮುಂದೆ ಎಂದಾದರು ಭೇಟಿಯಾಗುವಾ.
ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು.
-ಚಂದಿನ
ನಿಮ್ಮ ಕವನ ಸಂಕಲನ ಬಿಡುಗಡೆ ಸಮಾರಂಭ ಸುಲಲಿತವಾಗಿ ನೆರೆವೇರಿತೆಂದು ಭಾವಿಸಿರುತ್ತೇವೆ....ನಿಮಗೆ ಯಶ್ಸಸ್ಸು ಸಿಗಲೆಂದು ಆಶಿಸುತ್ತೆನೆ. ನಿಮ್ಮ ಕವನಗಳು ಅಧ್ಭುತವಾಗಿವೆ.
ನಿಮ್ಮ ಈ ಪುಸ್ತಕವನ್ನು ಕೊಳ್ಳವುದೆಲ್ಲೆಂದು ತಿಳಿಸಿ.
ಹಾಗೆ ನಿಮ್ಮ ಸಂಕಲನ ಬಿಡುಗಡೆ ಸಮಯದಲ್ಲಿ ಸಾಹಿತಿಗಳ ನುಡಿಮುತ್ತುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ
ಮನಸು
ಕುವೈತ್
ಮನಸು ಅವರೆ,
ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು.
-ಚಂದಿನ
Post a Comment