ಬರಗಾಲ ದಾಹವನ್ನು ಕೊಲ್ಲುತ್ತದೆ
ಫಸಲು ಸಿಗುವುದು ಬಹಳ ವಿರಳ
ಒಣಗಾಳಿಯು ನರ್ತಿಸುತ್ತಿದೆ ಮೈಸುಡುವ ಬಿಸಿಲಿನಲ್ಲಿ
ಎಳೆಗಳೆಲ್ಲಾ ಮರಗಳನ್ನು ತೊರೆಯುತ್ತಿವೆ
ಭೂಮಿ ಬಿರುಕು ಬಿಟ್ಟಿದೆ
ನಾನು ವಿಷಾದಿಂದ ನಡೆಯುತ್ತಿದ್ದೇನೆ
ಮುಳ್ಳು ಕಾಲನ್ನೇರಿದಾಗ
ಅಂಗಾಂಗಗಳು ನಡುಗುತ್ತವೆ ಬತ್ತಿಹೋಗಿ
ನನ್ನ ಹೃದಯ ಬಡಿತ ಡಂಗುರ ಬಾರಿಸಿದಂತಿದೆ
ಮಸುಕಾದ ಆಗಸದಡಿಯಲ್ಲೆಲ್ಲೋ ಮೃದುವಾಗಿ
ತೆಳುವಸ್ತ್ರವನ್ನಿಡಿದು ಮಹಿಳೆಯೋರ್ವಳು ನನ್ನತ್ತ ಬೀಸುತ್ತಿದ್ದಾಳೆ
ಅವಳ ಪಕ್ಷಕ್ಕೆ ಸೇರಿಸಿ ಕೊಳ್ಳುವುದಕ್ಕಾಗಿ
ಗುಣಿ ಅಗೆದು, ಮುಚ್ಚುತ್ತಿದ್ದಾರೆ
ಒಂದು ಭಯಾನಕ ಆಟದಂತೆ
ಸಾಕಷ್ಟು ಅಭದ್ರತೆ
ಆತಂಕ ಸೃಷ್ಟಿಸುವ ಅಪ್ರಬುದ್ಧತೆ
ನೀವು ಪರಿಶೀಲಿಸಿದಾಗ
ಗುಲಾಬಿ ಇನ್ನೂ ಉಸಿರಾಡುತ್ತಿತ್ತು
ಆದರೆ ನೀವು ಅವುಗಳ ಬೆಳೆಸಬೇಕಾದರೆ
ಆ ರುದ್ರಭೂಮಿಯಲ್ಲಿ
ಎಲ್ಲಿ ಪ್ರೀತಿ ಮತ್ತು ಕಾಮ
ಕದನಕ್ಕಿಳಿದಿರುವ ಸಂದರ್ಭದಲ್ಲಿ.
ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ
3 comments:
ಚಂದಿನವರೆ,
ಈಗಷ್ಟೆ "ಕೆಂಡಸಂಪಿಗೆ"ಯಲ್ಲಿ ನಿಮ್ಮ ಬ್ಲಾಗ್ ಪರಿಚಯ ನೋಡಿದೆ. ಅದರಲ್ಲಿ ಓದತಕ್ಕ ಅನುವಾದಗಳಿವೆ, ಒಮ್ಮೆ ಭೇಟಿಕೊಡಿ ಎಂದಿತ್ತು. ತಕ್ಷಣ ಭೇಟಿಕೊಟ್ಟೆ. ಏಕೆಂದರೆ ನಾನೂ ಒಬ್ಬ ಅನುವಾದಕನೇ. ನಿಮ್ಮ ಅನುವಾದಗಳನ್ನು ಓದಿದೆ. ತುಂಬಾ ಇಷ್ಟವಾದವು. ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ. ಅಲ್ಲಿ ನಾನು ಅನುವಾದಿಸಿದ ಪದ್ಯಗಳಿವೆ. ಓದಿ ಅಭಿಪ್ರಾಯ ಹೇಳಿ. ನನ್ನ ಬ್ಲಾಗ್ www.bisilahani.blogspot.com
ಪ್ರತಿಕ್ರಿಯೆಗೆ ಧನ್ಯವಾದಗಳು,
ಖಂಡಿತ ಬಿಸಿಲ ಹನಿಯ ಸವಿಯುವೆ.
-ಚಂದಿನ
Hai Re this Super mareyalu sadye eilla re super,,,,,,,,,,,,,,,,.
Post a Comment