Sep 13, 2008

ಮಳೆ

ಮಳೆ ಬಂತು ಮಳೆ, ಧೋ ಅಂತ ಮಳೆ
ನಿಲ್ಲದ, ಲಯ ಬಿಡಲೊಲ್ಲದ ಮಳೆ
ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
ಹುಚ್ಚಾಪಟ್ಟೆ ಚಚ್ಚುವ ಮಳೆ

ಅರ್ಧ ತಾಸಿನ ಬರಗಾಲದ ನಂತರ
ತನು ಮನ ತಣಿಸುವ ಮೋಹಕ ಮಳೆ
ಕುತೂಹಲ ಕೆರಳಿಸಿ, ಕಲರವ ಮೂಡಿಸಿ
ಸುರಿಯುತ ಸುರಿಯುವ ಸೋನೆಮಳೆ

ಮಾರನೆ ದಿನಕೆ ಅಲ್ಪವಿರಾಮ
ಆಗಸಕಾಗ ತುಸು ಆರಾಮ
ಗೆಳೆಯರೊಂದಿಗೆ ಹರಟೆಗೆ ಕೂತರೆ
ತರಾಟೆಗೆ ಶುರುವಿಟ್ಟ ಜೋರು ಮಳೆ

( ಮೂಲ ಆಂಗ್ಲ ಭಾಷೆ – ಮೊದಲ ಪ್ರಯತ್ನ ಕ್ಷಮೆಯಿರಲಿ )

1 comment:

ಚಂದಿನ | Chandrashekar said...

ಟೀನಾ ಅವರ (http://www.tinazone.wordpress.com)ಬ್ಲಾಗಲ್ಲಿ, ಈ ಕವನಕ್ಕೆ ನೀಡಿದ ಪ್ರತಿಕ್ರಿಯೆ.

Tina said,
September 14, 2008 @ 06:30 p09

ಚಂದಿನ,
ಇದು ನಮ್ದೇ ಯಾವುದೋ ಮಕ್ಕಳ ಮಳೆ ಹಾಡಿದ್ದ ಹಾಗಿದೆಯಲ್ಲ!!
ನಮ್ಮ ಕನ್ನಡದ ಸವಿ ಹೋಗದೆ ಇರುವ ಹಾಗೆ ಚೆಂದಾಗಿ ಅನುವಾದಿಸಿದೀರಿ.
Take a bow from here!
ಪುನಹ ಪುನಹ ಓದಿ ಖುಷಿಪಟ್ಟೆ.
-ಟೀನಾ