ಆಗಸಕೆ ಲಗ್ಗೆ ಇಟ್ಟಂತೆ
ಮೂಡಣದಿ ದಟ್ಟ ಕೆಂಪು
ಹಳದಿಯಾಗುವ ಪರಿ
ನೋಡಲೇನಚ್ಚರಿ
ಬೆಳಕು ಬೆರೆಸಿ ಕೆಂಪು
ಕರಗಿಸಿದಾತ
ಭೂಪ ಇವನ್ಯಾರೋ
ಭೂಪಟವನಾಳುವವ
ಭೂಭುಜನಿಗೆ ಇದೇ
ಕಿರೀಟ ಆ ಗಿರಿಶಿಖರ
ಅಷ್ಟು ಎತ್ತರದವನು
ಭೂತಗನ್ನಡಿಗೆ ದೊಡ್ಡವ
ಇವನ್ಯಾರೋ ಕದಲದವ ,
ಕರಗದವ, ನೋಡುಗರಿಗೆ
ಒಂದುಕಡೆ ಕಾಣದವ ,
ಕಂಡರೂ ಬದಲಾದವ
ಇದ್ದರೇ ಇವನಂತಿರಬೇಕು
ಗುಂಡಗೆ, ಗುಂಡಿಗೆ, ಕೆಂಪಗೆ
ಅಲುಗಾಡದಂತೆ, ಚಿಂತೆ
ಇಲ್ಲದೆ ಚಿತೆಯೇರುವವರೆಗೆ
ಬೆಳಕಿಗೆ ಕತ್ತಲ ತಂದವನು
ಕತ್ತಲಲಿ ಚುಕ್ಕಿ ಚಂದ್ರಮ
ತೋರಿದವನು, ಬೇಡಿದರೂ
ಬದಲಾಗದೆ ಕಿರಿದಾಗಿ ಕಾಣುವ
ಬೆಳ್ಳಿಮೋಡ ಕಾರ್ಮೋಡವಾಗಿಸಿ
ಅವರವರ ಮಧ್ಯೆ ಜಗಳವಿರಿಸಿ
ಗುಡುಗು, ಮಿಂಚುಗಳ ಸೃಷ್ಟಿಸಿ
ಮಳೆಯಾಗಿ ಧರೆಗೆ ಜಳಕ ಮಾಡಿಸಿ
ಬಣ್ಣಗಳ ಸರದಾರ ಬಾಗಿಲನು
ತೆರೆದಾನು ಬೆಳಕು ಹರಿಸಿ
ಪಡುವಣ, ಮೂಡಣಗಳ
ನಮಗಾಗಿ ಮೀಸಲಿರಿಸಿ
2 comments:
sir
nimma itteechina kavanagalu tumbaa chennaagide. tumbaa anubhavisi bareyuttiddeeri. odi khushiyaayu.
keep it up
-g n mohan
ಆತ್ಮೀಯ ಜಿ. ಎನ್. ಮೋಹನ್,
ಸಾಹಿತ್ಯದ ಸಿಹಿಯುಣಿಸಿ
ಆ ಜಗವ ಪರಿಚಯಿಸಿ
ಜೊತೆಗೆ ಪ್ರೋತ್ಸಾಹಿಸಿ
ಅಚ್ಚರಿಯ ಪ್ರತಿಕ್ರಿಯೆ
ನೀಡಿದ ನಿಮಗೆ
ಧನ್ಯವಾದಗಳು
ಒಲವಿನಿಂದ ,
- ಚಂದಿನ
Post a Comment