ಮನವ ಕಾಡುವ ಕೆಣಕುವ ಸಂಗತಿಗಳೆ
ಕರುಣೆಯಿರಲಿ ಕಾಲ ಕಲುಷಿತಗೊಂಡಿದೆ
ಮನೆಯೊಡಯನಿಗೇ ಮತಿಗೆಟ್ಟಿರಲು
ಮತ ನೀಡುವುದು ಯಾರಿಗೊ ಚಂದಿರ
ಪರಧಿಯಾಚೆಗೂ ಹರಹು ಚಾಚಿದೆ
ಯಾರ ಪಾತ್ರವೂ ಪೂರ್ಣವಾಗದೆ
ಸುಳಿವು ಸರಳವಾಗಿ ದೊರೆಯದಾಗ
ಸರಿಪಡಿಸುವುದೇಗೆ ಹೋಳೊ ಚಂದಿರ
ಗೋಜಲುಗಳನು ಗುಡಿಸಬೇಕೆ
ನೋವುಗಳನು ಮರೆಯಬೇಕೆ
ಸುತ್ತಿರುವ ಸುರಳಿ ಬಿಡಿಸಬೇಕೆ
ಜೊತೆಗಿರುವನು ಚಂದಿರ
ಬಿಸಿಲುಗುದುರೆ ಏರಿ ಬಂದೆ
ಬತ್ತಲಾರದ ಬಯಕೆಯಿಂದ
ಭಾರವಾಗಿವೆ ಭಾವನೆಗಳು
ಭರಿಸಲಾರೆನೊ ಚಂದಿರ
ಭಾವ ಸ್ತರದ ಮೂಲ ಸೆಳೆವಿದು
ಆಪ್ತವಾಗಿದೆ ಸುಪ್ತ ಆಕರ್ಷಣೆ
ಸವಿಯುವಷ್ಟು ಸಿಹಿಯನಿತ್ತು
ಸುಖವ ನೀಡಿತೊ ಚಂದಿರ
ಭವಬಂಧನದಲಿ ಸಿಲುಕಿತಾನು
ಭಾವಲೋಕದಿ ತಡಕುತಿರುವೆ
ಬಿಡಿಸಲಾಗದ ಒಗಟು ಗೆಳೆಯ
ಹುಸಿನಗುವ ಬೀರುವ ಚಂದಿರ
ಯಾಂತ್ರಿಕ ಬದುಕಿಗೆ ಬಡವನಾಗದೆ
ಪ್ರಕೃತಿ ಮಡಿಲಿಗೆ ಮರಳಿ ಬಾರೊ
ಗುಡುಗು ಮಿಂಚು ಸಿಡಿಲ ಸಾಲು
ಕೂಗಿ ಕರೆಯುತಿದೆ ಚಂದಿರ
ಸಂದಿಗ್ಧ ಸನ್ನಿವೇಶ ಎಚ್ಚರವಿರಲಿ
ಸಂಯಮವಿರಲು ಗೆಲುವು ಖಚಿತ
ಸಮಯಪ್ರಜ್ಞೆ ಸೂಕ್ತ ಮದ್ದು
ಎಂದು ಸಳಹೆ ಕೊಟ್ಟು ಚಂದಿರ
ಅತಿಯಾಸೆಗೆ ಬಲಿಯಾಗ ಬೇಡ
ಸರಳವಿಹುದು ಬದುಕು ಬಹಳ
ಎಲ್ಲೆಮೀರದೆ ಪಯಣ ಸಾಗಲಿ
ಸುಖವ ನೀಡುವ ಚಂದಿರ
ನಾಟಕೀಯ ವರ್ತನೆ ಅತಿರೇಕವಾಗಿದೆ
ಆತ್ಮವಂಚನೆ ದಿನವು ಸಾಮಾನ್ಯವಾಗಿದೆ
ಸಿಡಿಲು ಬಡಿಯುವ ಮುನ್ನ ಎಚ್ಚೆತ್ತುಕೊ
ಸಹಾಯ ಮಾಡುವ ಚಂದಿರ
2 comments:
ಚಂದಿನವರೆ,
ನಿಮ್ಮ ಮತ್ತೆ ಬರುವನು ಚಂದಿರ ಓದುತ್ತಿದ್ದರೆ ಗಜಲ್‍ವೊಂದನ್ನು ಓದಿದ ಅನುಭವಾಯಿತು. ತುಂಬಾ ಚನ್ನಾಗಿ ಮೂಡಿ ಬಂದಿದೆ. Keep writing.
ಧನ್ಯವಾದಗಳು
ಉದಯ ಇಟಗಿಯವರೆ,
- ಚಂದಿನ
Post a Comment