Jun 20, 2008

ಹನಿಗಳು – 2*

- 1 –
ಎದುರು ಮನೆ ಹುಡುಗಿಗೆ
ಹೊಡೆದರೆ Sight ?
ಖಂಡಿತ ಸಿಗುವುದೊಂದು
Site!

- 2 –
ಹಗಲಲ್ಲಿ ನಡೆಯುತ್ತೆ
ಬೈಟು
ಸಂಜೆಗೆ ಆಗಲೇ ಬೇಕು
ಟೈಟು.

- 3 –
ಗೆಳತಿಯಾದರೆ
ಗರುಡ ಮಾಲ್
ಗೆಳೆಯನಾದರೆ
ದರ್ಶಿನಿ ಹೋಟೆಲ್

- 4 –
ಕಾಸಿದ್ದರೆ ಫೋರಮ್
ಇರದಿದ್ದರೆ ಬರೀ ರಮ್

- 5 –
ಗೆದ್ದವರಿಗೆ ಗದ್ದುಗೆ
ಬಿದ್ದವರು ಬೀದಿಗೆ.

- 6 –
ಮನೆಯಲ್ಲಿ ಅವಳದೇ
ಕಾರುಬಾರು
ನನಗುಳಿದಿರುವುದು
ಬರೀ ಕಾರು, ಬಾರು.

2 comments:

ಕುಕೂಊ.. said...

ನಿಮ್ಮ ಹನಿಗಳು ತುಂಬಾ ಚನ್ನಾಗಿವೆ

Anonymous said...

ಕುಮಾರ ಸ್ವಾಮಿ ಕಡಾಕೊಳ್ಳರವರೆ,

ಬಂದು ಪ್ರೋತ್ಸಾಹಿಸಿದ ನಿಮಗೆ
ಧನ್ಯವಾದಗಳು

-ಚಂದಿನ