Jun 24, 2008

ತಡವಾಗಿ ಬಂದ ಅರಿವು*

ಅರೆ ಬೆಂದ ಅನ್ನ
ಅರೆ ತುಂಬಿದ ಕೊಡದಲ್ಲಿ
ಕುತ ಕುತ ಕುತ ಕುತ
ಕುದಿಯುತ್ತಿದೆ
ಸುರಿದ ನೀರು
ಆವಿಯಾದಷ್ಟೂ
ಬೆಂದಿರುವುದೆಂಬ ತರ್ಕ.

ಭುಸುಗುಡುವ ರಭಸ
ಹೆಚ್ಚಾದಂತೆಲ್ಲ
ಅದೇ ವೇಗಕೆ
ಸಂಯಮ ಬತ್ತಿ ಹೋಗುತ್ತಿದೆ
ಅರೆ ಬೆಂದ ಅನ್ನ ,
ಇಲ್ಲವೆ ಅಕ್ಕಿ
ಇಲ್ಲಿ ಸುಖವಿಲ್ಲ.

ಉರಿಯ ಬಿಸಿಯೇರಿ
ತನ್ನೊಡಲ ಸುಡುತ್ತಿದ್ದರೆ
ಸಹಿಸಲಾಗದ ಸ್ಥಿತಿ;
ಸುಮ್ಮನಿರಲಾಗದು
ಸುರಿವವರು ಯಾರಿಲ್ಲಿ ನೀರು?

ಧಿಗ್ಗನೆದ್ದು ಧಗ ಧಗನುರಿವ ಬೆಂಕಿ
ಎಲ್ಲವೂ ಕರಗಿ ಕರಕಲಾಗುವ
ಸಮಯ ಹತ್ತಿರವಾದಂತೆ
ಜೀವ ಹಾರಿ ಹೋಗುವ ಕ್ಷಣ
ಪಾಪ ಪ್ರಜ್ಞೆ ಕಾಡುತ್ತಿದೆ
ಪ್ರಾಣ ಭಯಕೊ ,
ಇಲ್ಲ ಮನುಷ್ಯತ್ವದ ನೆನಪಿಗೋ
ಇದೀಗ ಬಹಳ ತಡವಾಗಿದೆ.

2 comments:

ಅಂತರ್ವಾಣಿ said...

ಅದ್ಭುತವಾದ ಕವನ

Anonymous said...

ಅಂತರ್ವಾಣಿ ಜಯಶಂಕರ್ ರವರೆ,

ಪ್ರೋತ್ಸಾಹದ ಮಾತಿಗೆ ನಮನ,

-ಚಂದಿನ