May 18, 2009

ಬಯಕೆ

ಬಯಕೆ ಒಂದಾಗಲು ಬಯಸುವುದು
ಅಭ್ಯಾಸ ಬಲದಿಂದ
ವಾದ-ವಿವಾದಗಳಲ್ಲಿ, ಮಹತ್ಕಾರ್ಯಗಳಲ್ಲಿ
ದೇಹ ನಿತ್ರಾಣಗೊಂಡಿದೆ...
ಮನವು ಹಾರಿದೆ ಮುಕ್ತ ಕೊಳದಲ್ಲಿ
ಜೇನು ಕರಗಿ ಹನಿಯಾಗಿ ತೊಟ್ಟಿಕ್ಕುತ್ತಿರಲು
ಜೀವ ಜೀವವನ್ನು ಅಪ್ಪಿಕೊಂಡು
ಮತ್ತೆ ಆತ್ಮರತಿಯ ಹಂಬಲ ತೀವ್ರವಾಗುತ್ತಿದೆ
ಆಗಾಧ ರಕ್ತದದಲೆಗಳು ಮುನ್ನುಗ್ಗುತ್ತಿವೆ
ಬಯಕೆ ರಕ್ತನಾಳಗಳಲ್ಲಿ ಪ್ರವಾಹವಿಟ್ಟಿದೆ
ಆ ತೀವ್ರತೆಯು ಸವಿಯನ್ನು ಆಕ್ರಮಿಸಿದೆ
ಸೂರ್ಯ ಬದುಕಿರುವವರೆಗೆ
ನಾನು ಪ್ರಕಾಶಿಸುವ ನಂಬಿಕೆಯನ್ನು ಕಾಣಬಲ್ಲೆ
ನೀಲಿ ಬಣ್ಣದಿಂದ ಚಿತ್ರಿಸಿದ ರಾತ್ರಿಗಳಿರುವವರೆಗೆ
ಈ ಬಂಧ ಸುತ್ತಿಕೊಂಡಿರುವುದನ್ನು ನಾನು ಕಾಣಬಲ್ಲೆ
ಓ ನನ್ನ ಆತ್ಮೀಯ ಗೆಳತಿ, ನನ್ನ ಒಡತಿ
ಅಪ್ಪಿಕೊ ನನ್ನನ್ನು...
ನಿನ್ನ ಕೊಳೆತ ಪ್ರೀತಿಯನ್ನು ಉಸಿರಾಡುವೆ
ಉಕ್ಕುವ ಕಾಮದ ಭಾರವನ್ನಿಳಿಸುವೆ
ನಿನ್ನ ಸ್ಮರಣೆಯ ಸಾಗರದಲ್ಲಿ ಈಜಾಡಲು ಅವಕಾಶ ಕೊಡು
ಅದರಲ್ಲಿ ನಗುನಗುತ್ತಲೇ ಮುಳುಗಿ... ಸಾಯುವೆ
ಬಯಕೆ ಬಯಕೆಯನ್ನು ಸೋಲಿಸಿದಾಗ
ಮಾದಕ ಸಂಗೀತ ಕೇಳಿಸುತ್ತದೆ

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

2 comments:

ಮನಸು said...

ಸರ್,
ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ ಬಹಳ ಖುಷಿಯಾಗುತ್ತೆ ಸಾಲುಗಳು ಓದಲು... ಬಯಕೆ ಬಯಕೆಯನ್ನು ಸೋಲಿಸಿದಾಗ ಮಾದಕ ಸಂಗೀತ ಕೇಳಿಸುತ್ತದೆ.. ವಾಹ್!!! ಎಂತಹ ಅರ್ಥ ತುಂಬಾ ಇಷ್ಟವಾಗಿದೆ..
ಧನ್ಯವಾದಗಳು ಮತ್ತಷ್ಟು ಕವನಗಳ ನೀರಿಕ್ಷೆಯಲ್ಲಿ
ಮನಸು.
ಕುವೈಟ್

ಚಂದಿನ said...

ಧನ್ಯವಾದಗಳು ಮೇಡಮ್,

ಹೀಗೇ ಓದಿ ಪ್ರೋತ್ಸಾಹ ನೀಡುತ್ತಿರಿ.

- ಚಂದಿನ