May 25, 2009

ಒಂದು ವರದಿ

ಈ ನಾಲ್ಕೂ ವಿಷಯಗಳನ್ನು ಅರಿಯುವಷ್ಟು, ನನ್ನ ಬುದ್ದಿ ಎಚ್ಚರವಹಿಸಬೇಕು:
ಸುಮ್ಮನಿರುವುದು, ದುಃಖ, ಸ್ನೇಹಿತ ಹಾಗು ಶತ್ರು.

ಈ ನಾಲ್ಕು ಅಂಶಗಳು ಇಲ್ಲವಾದಲ್ಲಿ ನಾನು ಚೆನ್ನಾಗಿರಬಹುದಿತ್ತು:
ಪ್ರೀತಿ, ಕುತೂಹಲ, ಮೊಡವೆ ಮತ್ತು ಸಂಶಯ.

ಈ ಮೂರು ಅಂಶಗಳನ್ನು ನಾನೆಂದಿಗೂ ಪಡೆಯಬಾರದು:
ಅಸೂಹೆ, ಸಂತೃಪ್ತಿ ಮತ್ತು ಸಾಕಾಗುವಷ್ಟು ವೈನ್.

ಈ ಮೂರು ಅಂಶಗಳು ಸಾಯುವವರೆಗೂ ನನ್ನೊಂದಿಗಿರಬೇಕು:
ನಗು, ನಂಬಿಕೆ ಮತ್ತು ಕಣ್ಣೊಳಗಿನ ಪೊರೆ

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

3 comments:

ಮನಸು said...

ಎಲ್ಲಾ ಕವನಗಳು ಒಂದೊಂದು ವಿಶೇಷವನ್ನೊಳಗೊಂಡಿದೆ. ನಿಮ್ಮ ತಾಳ್ಮೆ ಮೆಚ್ಚಲೇಬೇಕು ಅವರು ಬರೆದಿರುವುದನ್ನು ನೀವು ಇಷ್ಟು ಅಚ್ಚುಕಟ್ಟಾಗಿ ನಮಗೆ ತಿಳಿಸಿದ್ದೀರಿ
ನಮ್ಮ ಬುದ್ದಿ ನಮ್ಮ ಎಚ್ಚರಿಕೆಯಲ್ಲಿದ್ದರೆ ಚೆನ್ನ ಅಲ್ಲವೆ..?
ಧನ್ಯವಾದಗಳು

ಚಂದಿನ | Chandrashekar said...

ನೀವು ಕಾವ್ಯವನ್ನು ಇಷ್ಟಪಡುವ ತೀವ್ರತೆ ಮೆಚ್ಚುಗೆಯಾಗುತ್ತದೆ ಮೇಡಮ್.

-ಚಂದಿನ

ಚಂದಿನ | Chandrashekar said...

ನೀವು ಕಾವ್ಯವನ್ನು ಇಷ್ಟಪಡುವ ತೀವ್ರತೆ ಮೆಚ್ಚುಗೆಯಾಗುತ್ತದೆ ಮೇಡಮ್.

-ಚಂದಿನ