May 20, 2009

ಸುಂದರ ಕಲ್ಪನೆ

ಅವಳ ನುಡಿಗಳು ಪಾರದರ್ಶಕ ನೀರಿನಂತೆ
ಕಲ್ಲಿನ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ
ದೂರದ ದಟ್ಟಡವಿಯಲ್ಲಿ, ಆ ಸ್ತಬ್ಧ ದಿಗಂತದಲ್ಲಿ
ಮೌನವು ಏಕಾಂಗಿಯಾಗಿ ಆಟವಾಡುತ್ತದೆ.

ಅವಳ ಭಾವನೆಗಳು ತಾವರೆ ಹೂವಿನಂತೆ
ಪವಿತ್ರ ಸರೋವರದಲ್ಲಿ ಪೂರ್ಣವಾಗಿ ಅರಳಿದೆ
ಬದಿಯ ಮಂದಿರದ ಮಹಾದ್ವಾರದ ಅಡಿಯಲ್ಲಿ
ಮೌನವು ನೆಲೆಸಿ ಕನಸು ಕಾಣುತ್ತದೆ.

ಅವಳ ಮುತ್ತುಗಳು ನಗುವ ಗುಲಾಬಿಗಳಂತೆ
ಗಾಢ ಮುಸ್ಸಂಜೆಗೂ ಹೊಳಪು ತರುತ್ತವೆ
ಆ ಬೃಂದಾವನವು ಮುಚ್ಚುವ ಸಮಯಕ್ಕೆ
ಮೌನವು ಅಲ್ಲಿ ನಿದ್ದೆಗೆ ಜಾರುತ್ತದೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

2 comments:

ಮನಸು said...

ಚಂದಿನ ಸರ್,
ಕವನ ಶೈಲಿ ತುಂಬಾ ಚೆನ್ನಾಗಿದೆ.... ಕವನದಲ್ಲಿ ಹೆಣ್ಣಿನ ಪ್ರೀತಿ ಬಿಂಬಿತ ತುಂಬಾ ಚೆನ್ನಾಗಿದೆ.
ಮೂಲ ಕವನ ಬರೆದವರು ನಿಮ್ಮ ಸ್ನೇಹಿತರೇ
ವಂದನೆಗಳು

ಚಂದಿನ said...

ಮೇಡಮ್,

ಇವರು ನನ್ನ ಮೆಚ್ಚಿನ ಕವಿಗಳಲ್ಲೊಬ್ಬರು, ಆಗಸ್ಟ್ 8, 1884ಲೂಯಿಸ್ ಮಿಸ್ಸೌರಿಯಲ್ಲಿ ಜನಸಿ, ನ್ಯೂಯಾರ್ಕ್ ನಲ್ಲಿ 1933 ರಲ್ಲಿ ನಿಧನರಾದರು.