Jun 4, 2009

ಹನಿಗಳು – 3

- 1 -
ಗುಡುಗು, ಮಿಂಚು,
ಸಿಡಿಲು,
ಗೆಳತಿ
ನಿನ್ನ ಮೊಬೈಲ್
ಬಿಲ್ಲು.

- 2 -
ಸೀರೆಯಲ್ಲಿ
ಸೆರೆಯಾದರೆ
ನೀ ಸಕ್ಕರೆ,
ಸೆರೆಯೇರಿಸಿ
ಬಳಿ ಬಂದರೆ
ನಿನ್ನ ತಕರಾರೆ?

- 3 -
ನೊರೆಯುಕ್ಕಿದ
ತಂಪು ಬಿಯರಿನಂತೆ
ಒಗರು,
ನೀನ್ನುಕ್ಕಿಸುವ ಬೆಚ್ಚಗಿನ
ಬೆವರು.

- 4 -
ಕಾದ ಕಾವಲಿ
ಮೇಲೆ ಬೆಣ್ಣೆಯಷ್ಟೇ
ವೇಗವಾಗಿ,
ನಿನ್ನಲ್ಲಿ ಕರಗಿ ಹೋಯಿತಲ್ಲೇ
ನನ್ನ ಯೌವನ.

- 5 -
ನಶೆ ಏರಿದ ನಂತರ
ನೀ ಕಾಣುವೆ ಸುಂದರ,
ಇಲ್ಲದಿದ್ದರೆ ನಮ್ಮ ನಡುವೆ
ಭಾರಿ ಕಂದರ.

- 6 -
ಕುಡಿಯುವುದು
ಬಿಡಲೇ ಬೇಕೆಂದು
ನೀನು ಹಂಬಲಿಸುವೆ,
ನಿನ್ನ ಬಿಡಲೇ ಬೇಕೆಂದು
ದಿನಾ ಕುಡಿಯುವೆ.

- 7 -
ಮೊದಲ ವಾರದಲ್ಲೇ
ಖಾಲಿ ನಿನ್ನ ಪ್ರೀತಿ,
ಕೊನೆಯ ವಾರದವರೆಗೂ
ನನಗೆ ಭಾರೀ ಭೀತಿ.

- 8 -
ಇಸ್ಪೀಟು ಆಡಿದರೆ
ಸರ್ವನಾಶವೆಂದೇಕೆ
ನೀ ಜರಿಯುವೆ.
ನಿನ್ನ ಮದುವೆಯಾದ
ಕೂಡಲೆ ನಾಶವಾದೆನೆಂದು
ನಾನರಿತಿರುವೆ.

- 9 -
ಮಿಸ್ಡ್ ಕಾಲ್ಸ್ ಕೊಡುವುದು
ನಿನ್ನ ಅಭ್ಯಾಸ,
ಪ್ರತಿ ಕರೆ ನೀಡದಿರುವುದು
ನನ್ನ ದುರಭ್ಯಾಸ.

- 10 -
ಕುಡಿದಾಗ ಮಾತ್ರ
ನವಾಬ,
ಇಲ್ಲವಾದರೆ ನಾನೂ
ಗರೀಬ.

5 comments:

shivu.k said...

ಚಂದಿನ ಸರ್,

ಬಿಸಿಲಹನಿ ಉದಯ್ ಸರ್ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ..
ನಿಮ್ಮ ಚುಟುಕು ಕವನಗಳು ಚುಟುಕಾಗಿದ್ದರೂ ಚುರುಕು ಮುಟ್ಟಿಸುವಲ್ಲಿ ಸ್ಟ್ರಾಂಗ್ ಆಗಿವೆ.

ಕಾದ ಕಾವಲಿ
ಮೇಲೆ ಬೆಣ್ಣೆಯಷ್ಟೇ
ವೇಗವಾಗಿ,
ನಿನ್ನಲ್ಲಿ ಕರಗಿ ಹೋಯಿತಲ್ಲೇ
ನನ್ನ ಯೌವನ.

ಈ ಚುಟುಕಂತೂ ತುಂಬಾ ಚೆನ್ನಾಗಿದೆ...

ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...ಬಿಡುವಾದಾಗ ಹೀಗೆ ಚುಟುಕುಗಳನ್ನು ಓದಿಕೊಳ್ಳಬಹುದು...
ನೀವು ಬಿಡುವು ಮಾಡಿಕೊಂಡು ನನ್ನ ಛಾಯಾ ಕನ್ನಡಿ ಬ್ಲಾಗಿನೆಡೆಗೆ ಇಣುಕಿರಿ...
ಧನ್ಯವಾದಗಳು.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ....

ಬಿಂಬ ಹಾಗು ಹನಿಗಳು ಸೂಪರ್

ದೀಪಸ್ಮಿತಾ said...

ನಿಮ್ಮ ಹನಿಗವನಗಳು ಚಿಕ್ಕ ಚೊಕ್ಕವಾಗಿವೆ

PARAANJAPE K.N. said...

ಚುಟುಕು ಕವನಗಳು ಚೆನ್ನಾಗಿವೆ.

ಚಂದಿನ said...

ನಿಮ್ಮ ಪ್ರತಿಕ್ರಿಯೆ ತುಂಬ ಖುಷಿ ಕೊಟ್ಟಿದೆ,
ಖಂಡಿತ ನಿಮ್ಮ ಬರಹಗಳನ್ನು ಓದುವೆ.

ಶಿವು, ಶಿವಪ್ರಕಾಶ್, ದೀಪಸ್ಮಿತ ಹಾಗೇ ಪರಾಂಜಪೆ ಅವರೆಗೆ
ನನ್ನ ಕೃತಜ್ಞತೆಗಳು.