Jun 20, 2009

ನಿನ್ನ ಆಯ್ಕೆಗಳು

ನಿನಗಿರುವುದು
ಕೇವಲ ಎರಡೇ ಎರಡು
ಆಯ್ಕೆಗಳು:
ಬೇರುಗಳು,
ಇಲ್ಲಾ ರೆಕ್ಕೆಗಳು
ಇವೆರಡರಲ್ಲಿ
ಯಾವುದಾದರೂ ಒಂದನ್ನು
ಆರಿಸಿಕೊ.

ನೀನೇನಾದರೂ
ಬೇರುಗಳುನ್ನು
ಆರಿಸಿಕೊಂಡರೆ---
ಕೂಡಲೇ ಖಚಿತ ಪಡಿಸಿಕೊ
ಅವುಗಳು
ಉದ್ದವಾಗಿ, ಆಳವಾಗಿ ಬೆಳೆದು,
ಗಟ್ಟಿಯಾದ ತಳಪಾಯದೊಂದಿಗೆ
ನೆಲೆಯೂರಿವೆ ಎಂದು.
ನಂತರ ನೀನು ಅತ್ಯಗತ್ಯವಾಗಿ
ಸುಂದರ ಎಲೆಗಳಿಂದ ಸಜ್ಜಾಗಿ,
ಪರಿಮಳ ಭರಿತ ಹೂವುಗಳೊಂದಿಗೆ,
ರಸ ಭರಿತ ಹಣ್ಣುಗಳನ್ನು
ನೀಡಿದಾಗಲೇ
ಜಗವು ನಿನ್ನಲ್ಲಿಗೆ ಬರಲು
ಹಾತೊರೆಯುತ್ತದೆ.

ಇಲ್ಲವಾದರೆ ನೀನು
ರೆಕ್ಕೆಗಳನ್ನು
ಆರಿಸಿಕೊ---
ಸ್ವಚ್ಛಂದವಾಗಿ
ಹಾರುತ್ತಾ...
ಜಗದ ಬೆನ್ನಟ್ಟಲು.

2 comments:

ಬಿಸಿಲ ಹನಿ said...

ಚಂದಿನವರೆ,
ಇಡಿ ಕವನದ ಅರ್ಥ ಮತ್ತು ಭಾಷೆ ಚನ್ನಾಗಿ ಮೂಡಿಬಂದಿದೆ. ಅದರಲ್ಲೂ ಈ ಸಾಲುಗಳಂತು ನನಗೆ ತುಂಬಾ ಇಷ್ಟವಾದವು.
ನೀನೇನಾದರೂ
ಬೇರುಗಳುನ್ನು
ಆರಿಸಿಕೊಂಡರೆ---
ಕೂಡಲೇ ಖಚಿತ ಪಡಿಸಿಕೊ
ಅವುಗಳು
ಉದ್ದವಾಗಿ, ಆಳವಾಗಿ ಬೆಳೆದು,
ಗಟ್ಟಿಯಾದ ತಳಪಾಯದೊಂದಿಗೆ
ನೆಲೆಯೂರಿವೆ ಎಂದು.
ನಂತರ ನೀನು ಅತ್ಯಗತ್ಯವಾಗಿ
ಸುಂದರ ಎಲೆಗಳಿಂದ ಸಜ್ಜಾಗಿ,
ಪರಿಮಳ ಭರಿತ ಹೂವುಗಳೊಂದಿಗೆ,
ರಸ ಭರಿತ ಹಣ್ಣುಗಳನ್ನು
ನೀಡಿದಾಗಲೇ
ಜಗವು ನಿನ್ನಲ್ಲಿಗೆ ಬರಲು
ಹಾತೊರೆಯುತ್ತದೆ.

ಚಂದಿನ said...

ಧನ್ಯವಾದಗಳು ಉದಯ್ ಇಟಗಿ ಅವರೆ.