ದಿನಗಳು ಉರುಳುತ್ತಿರುತ್ತವೆ ಸುತ್ತಿಕೊಂಡು
ಅವುಗಳ ಹುಚ್ಚು ಕುಣಿತದೊಂದಿಗೆ;
ಮತ್ತೆ ನೀನು ಉಸಿರಾಡುತ್ತಲೇ ಇರಬೇಕು,
ಆದರೆ, ನಾನು ಸುರಕ್ಷಿತವಾಗಿರುತ್ತೇನೆ ನರಕದಲ್ಲಿ.
ಜನವರಿಯ ಹವಾಮಾನದಂತೆ,
ವರ್ಷಗಳು ಚುರುಕಾಗಿ ಕಚ್ಚುತ್ತವೆ,
ಮತ್ತೆ ನಿನ್ನ ಎಲುಬುಗಳನ್ನು ಒಟ್ಟಿಗೆ ಎಳೆಯುತ್ತವೆ,
ನಿರಂತರ ಒಟಗುಟ್ಟುವ ಹೃದಯ ಸುತ್ತಿಕೊಂಡು.
ನೀನು ಸೊಗಸಾಗಿರುವವುಗಳಿಂದ ರೂಪುಗೊಂಡಿರುವೆ
ಅವುಗಳು ಒಣಗಿ, ಮುದುಡಿ, ಬಿರುಕು ಬಿಡುತ್ತವೆ.
ಯಾವುದು ಕಂಡರೆ ನಿನಗೆ ತುಂಬಾ ಭಯವಾಗತ್ತದೆಯೋ,
ಅದೇ ನಿನಗೆ ಎಲ್ಲರ ಕಣ್ಣುಗಳಿಂದ ಕಾಣಿಸುತ್ತಿರುತ್ತದೆ.
ನಂತರ ನೀನು ತಪ್ಪು ಮಾಡುತ್ತಲೇ ಮುಂದುವರೆಯುವೆ
ತೀವ್ರ ದರ್ಪದ ಬಿರುಸು ನುಡಿಗಳ ಸಾಲು
ಕುಹಕ ನಗೆಯಿಂದ ನಿನ್ನ ಗಂಟಲು ಸೀಳುತ್ತದೆ
ಮತ್ತು ನಿನ್ನ ಕಣ್ಣುಗಳನ್ನು ಉಪ್ಪುನೀರಿಂದ ಸುಡುತ್ತದೆ.
ನೀನು ತೀರಾ ನಿಶಕ್ತನಾಗಿ, ಅಪ್ರಸ್ತುತನಾಗಿಬಿಡುವೆ
ಮಂದನೋಟದಿಂದ, ಎಲ್ಲವನ್ನೂ ಅಡಗಿಸಿಟ್ಟ ತಲೆಯೊಂದಿಗೆ,
ನಾನು ಮಾತ್ರ ಚಿರಯೌವನದೊಂದಿಗೆ, ಖುಷಿಯಾಗಿದ್ದೇನೆ
ಸತ್ತು ಗರ್ಜಿಸುತ್ತಿರುವವರ ಜೊತೆಯಲ್ಲಿ.
ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ
3 comments:
ಏನು ಅರ್ಥವಿದೆ ಈ ಕವನಗಳ ಸಾಲುಗಳಲ್ಲಿ ವಾಹ್!! ಸೊಪರ್!!!
ನೀನು ತೀರಾ ನಿಶಕ್ತನಾಗಿ, ಅಪ್ರಸ್ತುತನಾಗಿಬಿಡುವೆ
ಮಂದನೋಟದಿಂದ, ಎಲ್ಲವನ್ನೂ ಅಡಗಿಸಿಟ್ಟ ತಲೆಯೊಂದಿಗೆ,
ನಾನು ಮಾತ್ರ ಚಿರಯೌವನದೊಂದಿಗೆ, ಖುಷಿಯಾಗಿದ್ದೇನೆ
ಸತ್ತು ಗರ್ಜಿಸುತ್ತಿರುವವರ ಜೊತೆಯಲ್ಲಿ.
ಈ ಸಾಲುಗಳು ತುಂಬಾ ಇಷ್ಟವಾದವು.......
ನನ್ನ ಮೌನ-ಕಣ್ಣೀರಿನ ಕವನವನೊಮ್ಮೆ ನೋಡಿ ಅನಿಸಿಕೆ ತಿಳಿಸಿ
ಧನ್ಯವಾದಗಳು ಮೇಡಮ್.
Post a Comment