May 21, 2009

ಪ್ರೀತಿಯ ನಂತರ

ಇನ್ನು ಅಲ್ಲಿ ಯಾವ ಮೋಡಿಯೂ ನಡೆಯುವುದಿಲ್ಲ
ಎಲ್ಲರಂತೆಯೇ ನಾವೂ ಸಹ ಭೇಟಿಯಾಗುತ್ತೇವೆ
ನೀನು ಯಾವ ವಿಸ್ಮಯವನ್ನೂ ನನ್ನಲ್ಲಿ ಸೃಷ್ಟಿಸಲು ಆಗುತ್ತಿಲ್ಲ,
ಹಾಗೇ ನಾನೂ ಸಹ ನಿನ್ನಲ್ಲಿ.

ನೀನು ಬೀಸುವ ಗಾಳಿಯಾಗಿದ್ದೆ ಮತ್ತೆ ನಾನು ಸಾಗರ---
ಅಲ್ಲಿ ಯಾವ ಅದ್ಭುತವೂ ಘಟಿಸುವುದಿಲ್ಲ
ನಾನು ಬೆಳೆದಿದ್ದೇನೆ ಲೆಕ್ಕವಿಲ್ಲದಷ್ಟು
ದಡದ ಪಕ್ಕದಲ್ಲಿರುವ ಹೊಂಡದಂತೆ.

ಆದರೆ, ಹೊಂಡವು ಭೋರ್ಗರೆವ ಅಲೆಗಳು ಅಪ್ಪಳಿಸುವುದರಿಂದ ಪಾರಾದರೂ
ಮತ್ತೆ ಅಲೆಗಳ ತೀವ್ರ ಏರಿಳಿತಗಳನ್ನು ಕ್ರಮೇಣ ಕ್ಷೀಣಿಸಿ ನಿಲ್ಲಿಸಿದರೂ
ಅದು ಸಾಗರಕ್ಕಿಂತಲೂ ಹೆಚ್ಚು ಕಹಿಯಾಗಿ ಬೆಳೆಯುತ್ತದೆ
ಎಲ್ಲಾ ಅದರ ನೆಮ್ಮದಿಗಾಗಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

2 comments:

ಜಲನಯನ said...

ಚಂದಿನರವರೇ,
ನಿಮ್ಮ ಕವನವನ್ನು ಯುವಕವಿಯಲ್ಲಿ ನೋಡಿದೆ,
ಅನುವಾದ ಕವಿತೆಯಲ್ಲೂ ನಿಮಗೆ ಆಸಕ್ತಿಯಿದೆ ಎನ್ನುವುದು ತಿಳಿಯಿತು...ಇದು ಸ್ವಲ್ಪ ಕ್ಲಿಷ್ಟಕರ ಅಂತ ನನ್ನ ಅನಿಸಿಕೆ ಏಕೆಂದರೆ ಮೂಲ ಯಾವಾಗಲೂ ಓದುಗರ ಮುಂದಿರುತ್ತೆ ಹಾಗಾಗಿ ಮೂಲಕ್ಕೆ ಧಕ್ಕೆ ಬರದಂತೆ ಮಂಡಿಸುವುದು...ಸುಲಭವಲ್ಲ. ಸಾರಾ ತೀಯಸ್ಡೇಲ್ ರವರ ಅನುವಾದಗಳನ್ನು ಕೊಟ್ಟಿದ್ದೀರಿ...ಮುಂದೆ ಅವರ ಬಗ್ಗೆ ಒಂದು ಪ್ಯಾರಾ post ಮಾಡಿ...
ಜಲನಯನ (blog sspot) ಗೂ ಒಮ್ಮೆ ಭೇಟಿ ನೀಡಿ...

ಚಂದಿನ said...

ಧನ್ಯವಾದಗಳು ಜಲನಯನ ಅವರೆ,

ಖಂಡಿತ ಭೇಟಿ ಕೊಡುವೆ.

-ಚಂದಿನ