Feb 2, 2008

ಮಾಯವಾದರು ಎಲ್ಲಿಗೆ

ಯಾರು ತಂದು ನೆಟ್ಟವರು
ಯಾವ ಪ್ರತಿಫಲ ಬಯಸಿ
ಎಲ್ಲಿ ಮರೆಯಾಗಿ ಹೋದರು

ಸಸಿ ಗಿಡವಾಗಿ, ಗಿಡ ಮರವಾಗಿ,
ಹೆಮ್ಮರವಾಗಿ ಇಂದು ನೆರಳು ನೀಡುತ್ತಿವೆ
ತಂಪನ್ನು ಚೆಲ್ಲಿ ಆಗಸವನ್ನು ಚುಂಭಿಸುವ ತವಕ

ಯಾರ ಕಲ್ಪನೆಯ ವಿನ್ಯಾಸಕ್ಕೆ
ಬಾಹು ಬಳಸಿ ಬೆಳೆಸಿ ನಿಂತಿವೆ
ಹಸಿರ ಸೀರೆಯ ನೆರಿಗೆ ಭೂರಮೆಗೆ
ತಾವಾಗಿ ನಾಚಿ ಕಿರು ನಗೆ ಬೀಸುತ್ತಿವೆ

ಬಗೆ ಬಗೆಯ ತರುಗಳ ಹರಳುಗಳಂತೆ
ಸರವಾಗಿ ಪೋಣಿಸಿ ಶಿಖರಗಳನ್ನು
ಸಿಂಗರಿಸಿ ಯಾವ ಮರದಡಿ ಅಡಗಿಹರು

ವನ್ಯ ಜೀವ ರಾಶಿಗಳಿಗೆ ನೆಲೆ
ಫಲ ಪುಷ್ಪ ಸಿರಿಗಂಧ ಸವಿ
ಮೋಡ ಸೆರೆಹಿಡಿದು ಮಳೆ
ಮಾಯಾವಿ ನದಿಗಳ ಜನನ

No comments: