ಸುಪ್ತ ಜನನ ಸುಪ್ತ ಮರಣ
ಸುಪ್ತ ಮನವು ಸುಪ್ತ ಜಗವು
ನಿಗೂಢ ಕಾಣೋ ನಿನ್ನ ಪಯಣ
ವಿಸ್ಮಯವು ಕಣೋ ನಿನ್ನ ಹರಣ
ಕೂಡಿ ಕಳೆವ ಲೆಕ್ಕವಿಟ್ಟು
ಭಾಗಾಕಾರದ ಒಳಗುಟ್ಟು
ಗುಣಾಕಾರದ ಬಯಕೆ ಹೊತ್ತು
ಇವರ ಜೊತೆಗೆ ದಿಕ್ಕುಗೆಟ್ಟು
ಕೇರಿಗೊಂದು ಗುಡಿಯ ಕಟ್ಟಿ
ಹೆಸರಿಗೊಂದು ಶಿಲೆಯ ಸೃಷ್ಟಿ
ದೇವರೆಂದು ಭಯವನಿರಿಸಿ
ಮುಗ್ದ ಜನರ ಬೆವರ ಹರಿಸಿ
ಮನಕೆ ನೂರು ಆಸೆಯನಿಟ್ಟು
ದಿನವು ಹಲವು ವೇಷ ತೊಟ್ಟು
ಡೊಳ್ಳು ಕುಣಿತ ಹೇಳಿಕೊಟ್ಟು
ದಣಿದ ದೇಹಕಿಲ್ಲ ಮೂರುತುತ್ತು
ಸೋಲು ಗೆಲುವಿನುಳವ ಬಿಟ್ಟು
ಅಸಮಾಧಾನ ಬೆಳೆಯ ಬಿತ್ತು
ಅಂಧಕಾರ ಹೊಳೆಯ ಹರಿಸಿ
ಜಾತಿ ಮತದ ಮಂತ್ರ ಜಪಿಸಿ
ಸುಪ್ತ ಜನನ ಸುಪ್ತ ಮರಣ
ಸುಪ್ತ ಮನವು ಸುಪ್ತ ಜಗವು
ನಿಗೂಢ ಕಾಣೋ ನಿನ್ನ ಪಯಣ
ವಿಸ್ಮಯವು ಕಣೋ ನಿನ್ನ ಹರಣ
1 comment:
ಸೊಗಸಾಗಿದೆ.
ಮುರಳಿ
Post a Comment